Monday, December 11, 2023

Latest Posts

ಇಸ್ರೇಲ್‌ನ ವೀರ ವನಿತೆ: ರಕ್ಷಣಾ ಕಾರ್ಯಾಚರಣೆಯಲ್ಲಿ 25 ಉಗ್ರರ ಪ್ರಾಣ ಮಟಾಶ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಮಾಸ್‌ ಭಯೋತ್ಪಾದಕರಿಂದ ಕಿಬ್ಬುಟ್ಜ್ ನಗರವನ್ನು ರಕ್ಷಿಸಲು ಇಸ್ರೇಲ್‌ನ ಮಹಿಳೆಯೊಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ್ದಾರೆ. ಈ ಸಂದರ್ಭದಲ್ಲಿ 25 ಭಯೋತ್ಪಾದಕರನ್ನು ಕೊಂದು ನಗರವನ್ನು ರಕ್ಷಿಸಿಕೊಳ್ಳುವಲ್ಲಿ ಈಕೆಯ ಸಾಧನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಇಸ್ರೇಲ್‌ನ ಹೀರೋ ಎಂದೇ ಹೆಸರು ಪಡೆದರು.

25 ವರ್ಷದ ಇನ್ಬಾರ್ ಲೀಬರ್ ಮನ್, ಇಸ್ರೇಲಿ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದು, ಭಯೋತ್ಪಾದಕ ದಾಳಿಯಿಂದ ಜನರನ್ನು ರಕ್ಷಿಸುವಲ್ಲಿ ತಮ್ಮ ಧೈರ್ಯವನ್ನು ತೋರಿದ್ದಾರೆ.

ಇಸ್ರೇಲ್ ರಕ್ಷಣಾ ಪಡೆಗಳ ಭದ್ರತಾ ಸಂಯೋಜಕಿ

ಈಕೆ ಡಿಸೆಂಬರ್ 2022 ರಿಂದ ಇಸ್ರೇಲ್ ರಕ್ಷಣಾ ಪಡೆಗಳಲ್ಲಿ ಭದ್ರತಾ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದು, ಪದವಿ ಪಡೆದ ನಂತರ, ಇಸ್ರೇಲಿ ಸೈನ್ಯಕ್ಕೆ ಸೇರಿ ದೇಶ ಸೇವೆಯಲ್ಲಿ ತೊಡಗಿದ್ದಾರೆ. ಹಮಾಸ್‌ನ ಭಯೋತ್ಪಾದಕ ದಾಳಿ ಪ್ರಾರಂಭವಾದಾಗಿನಿಂದ ದೇಶ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಇವರು ತಮ್ಮ 12 ಸದಸ್ಯರ ಭದ್ರತಾ ತಂಡದ ಸಹಾಯದ ಮೂಲಕ 25 ಭಯೋತ್ಪಾಕರ ಹತ್ಯೆಗೈದದರು. ಲೀಬರ್ ಕೈಯಲ್ಲಿ ಐವರು ಉಗ್ರರು ಹತರಾಗಿದ್ದು, ನಾಲ್ಕು ಗಂಟೆಗಳಲ್ಲಿ 20 ಭಯೋತ್ಪಾದಕರನ್ನು ಭದ್ರತಾ ತಂಡ ಹತ್ಯೆಮಾಡಿದೆ.

25 ಭಯೋತ್ಪಾದಕರನ್ನು ಕೊಂದ ಇಸ್ರೇಲಿ ವನಿತೆ ಇನ್ಬಾರ್ ಲೀಬರ್‌ಮನ್‌ನ ಶೌರ್ಯದ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಸ್ರೇಲಿ ಸೇನೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!