ನರರಾಕ್ಷಸರ ಕೈಯಲ್ಲಿ ನರಳೋದಕ್ಕಿಂತ ಆಕೆ ಸಾವು ಸಮಾಧಾನ ನೀಡಿತ್ತು: 8 ವರ್ಷದ ಮಗಳ ಸಾವಿನ ನೋವು ಹಂಚಿಕೊಂಡ ಇಸ್ರೇಲ್‌ ಪ್ರಜೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಸ್ರೇಲ್‌ನ ಜನರ ಮೇಲೆ ಹಮಾಸ್‌ ಉಗ್ರರು ದಾಳಿ ನಡೆಸಿದ್ದು, ಹಿಂಸಾಚಾರ ವ್ಯಾಪಕ ಹರಡಿದೆ. 40ಕ್ಕೂ ಅಧಿಕ ಮಕ್ಕಳ ಶಿರಚ್ಛೇದ ಮಾಡಿ ಸಾಯಿಸಿದ್ದಾರೆ.

ಅದೇ ರೀತಿ ಇಸ್ರೇಲ್‌ ನಥಾಮಸ್‌ ಹಾಂಡ್‌ ಎಂಬವರ ಮಗಳನ್ನು ಹತ್ಯೆ ಮಾಡಿದ್ದು , ತನ್ನ ನೋವನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಮಾಧ್ಯಮದ ಎದುರು ತಮ್ಮ ಮಗಳ ಸಾವಿನ ಸಂಕಟವನ್ನು ತೋಡಿಕೊಂಡ ಕೊಂಡ ಹಾಂಡ್‌, ಹಮಾಸ್‌ ಉಗ್ರರು ತಮ್ಮ 8 ವರ್ಷದ ಪುತ್ರಿ ಎಮಿಲಿಯನ್ನು ಸಾಯಿಸಿದ ಸುದ್ದಿ ನನಗೆ ಗೊತ್ತಾದ ಬೆನ್ನಲ್ಲಿಯೇ ನಾನು ಸಮಾಧಾನ ಮಾಡಿಕೊಂಡೆ ಎಂದು ಹೇಳಿದ್ದಾರೆ.

ತನ್ನ ಮಗಳು ಒತ್ತೆಯಾಳಾಗಿ ಹಮಾಸ್‌ನ ನರರಾಕ್ಷಸರ ಕೈಯಲ್ಲಿ ನರಳೋದಕ್ಕಿಂತ ಆಕೆ ಸಾವು ಕಂಡಿದ್ದಾಳೆ ಎಂದು ಸುದ್ದಿ ಕೇಳಿದ ತಕ್ಷಣ ನನಗೆ ಸಮಾಧಾನವಾಯಿತು. ಆ ಹಂತದಲ್ಲಿ ನನಗೆ ಆಕೆ ಸಾವು ಕಂಡಿದ್ದೇ ಆಶೀರ್ವಾದ ಎಂದು ಭಾವಿಸಿದ್ದೆ ಎಂದು ಅಳುತ್ತಲೇ ಹೇಳಿದ್ದಾರೆ.

ನನ್ನ ಮಗಳು ಕಿಡ್ನಾಪ್‌ ಆದ ಬಳಿಕ ಎರಡು ದಿನಗಳ ಕಾಲ ಅಪ್‌ಡೇಟ್‌ಗಾಗಿ ಕಾದಿದ್ದೆ. ಎರಡು ದಿನಗಳ ಬಳಿಕ ಉಗ್ರರು ಆಕೆಯನ್ನು ಕೊಂದಿದ್ದಾರೆ ಎನ್ನುವ ಸುದ್ದಿ ತಿಳಿಯಿತು. ಆ ಕ್ಷಣ ನಾನು ಸಮಾಧಾನಪಟ್ಟೆ. ಒತ್ತೆಯಾಳಾಗಿ ನರಳೋದಕ್ಕಿಂತ ಆ ಕ್ಷಣದಲ್ಲಿ ಅವಳ ಸಾವು ನನಗೆ ಸಮಾಧಾನ ನೀಡಿತ್ತು ಎಂದು ಭಾವುಕವಾಗಿ ಮಾತನಾಡಿದ್ದಾರೆ.

ಶನಿವಾರ ಬೆಳಗ್ಗೆ 7 ಗಂಟೆಯ ಸುಮಾರಿಗೆ ಪ್ಯಾಲೆಸ್ತೇನಿಯನ್‌ ಭಯೋತ್ಪಾದಕರು ಕಿಬ್ಬುಟ್ಜ್ ಪ್ರದೇಶಕ್ಕೆ ನುಗ್ಗಿ ಕನಿಷ್ಠ 100 ಜನರನ್ನು ಕಗ್ಗೊಲೆ ಮಾಡಿದ್ದರು. ಈ ಹಂತದಲ್ಲಿ ತನ್ನ ಮಗಳು ಕಾಣೆಯಾಗಿದ್ದಳು ಎಂದು ಥಾಮಸ್‌ ಹಾಂಡ್‌ ಹೇಳಿದ್ದಾರೆ. ಆ ದಿನ ಕಿಬ್ಬುಟ್ಜ್ ಪ್ರದೇಶದಲ್ಲಿ12 ಗಂಟೆಗಳ ಕಾಲ ಗುಂಡಿನ ಕಾಳಗ ನಡೆಯಿತು. ಪಕ್ಕದ ಮನೆಗೆ ಮಲಗಲು ತೆರಳಿದ್ದ ಎಮಿಲಿ ಆ ಬಳಿಕ ಏನಾದಳು ಎನ್ನುವ ಮಾಹಿತಿಯೇ ಸಿಕ್ಕಿರಲಿಲ್ಲ ಎಂದು ಮಗಳನ್ನು ನೆನಪು ಮಾಡಿಕೊಂಡು ಥಾಮಸ್‌ ಹಾಂಡ್‌ ಕಣ್ಣೀರಿಟ್ಟರು.

ಪೊಲೀಸರು ‘ನಾವು ಎಮಿಲಿಯನ್ನು ಕಂಡುಹಿಡಿದ್ದೇವೆ. ಆದರೆ ಆಕೆ ಸಾವು ಕಂಡಿದ್ದಾಳೆ’ ಎಂದು ಅವರು ತಿಳಿಸಿದ ತಕ್ಷಣ, ನಾನು ‘ಯೆಸ್‌’ ಎನ್ನುತ್ತಾ ನಗು ಬೀರಿದ್ದೆ. ಯಾಕೆಂದರೆ, ಆ ಕ್ಷಣದಲ್ಲಿ ಆಗಬಹುದಾದ ಸಾಧ್ಯತೆಗಳ ಪೈಕಿ ಅದು ಒಳ್ಳೆಯ ಸುದ್ದಿಯಾಗಿತ್ತು ಎಂದು ನಡುಗುವ ಧ್ವನಿಯಲ್ಲೇ ಹಾಂಡ್‌ ಹೇಳಿದ್ದಾರೆ.

ಸಾಮಾನ್ಯವಾಗಿ ಅವಳು ಮನೆ ಬಿಟ್ಟು ಎಲ್ಲೂ ಹೋಗೋದಿಲ್ಲ. ತೀರಾ ಅಪರೂಪ. ಆದರೆ, ಶುಕ್ರವಾರ ರಾತ್ರಿ, ತಾನು ಸ್ನೇಹಿತರ ಮನೆಯಲ್ಲಿ ಮಲಗೋಕೆ ಹೋಗುವುದಾಗಿ ಹೇಳಿ ಹೊರಟಿದ್ದಳು. ಆದರೆ, ಮರುದಿನವೇ ಕಿಬ್ಬುಟ್ಜ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ಗುಂಡಿನ ದಾಳಿ ನಡೆಯುವ ಹೊತ್ತಿಗಾಗಲೇ, ದೇಶದ ಸೇನೆ ಕೆಲ ಹೊತ್ತಿನಲ್ಲಿಯೇ ಇಲ್ಲಿಗೆ ಬರಲಿದೆ. ಅಲ್ಲಿಯವರೆಗೂ ನಾವು ಬದುಕಿರಬೇಕು ಅಷ್ಟೇ ಎನ್ನುವ ತೀರ್ಮಾನ ಮಾಡಿದ್ದೆವು’ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!