ಭಾಷಣ ವೇಳೆ ಬಂತು ಅಲರ್ಟ್ ಮೆಸೇಜ್: ಡಿ.ಕೆ ಶಿವಕುಮಾರ್ ಕೊಟ್ಟ ರಿಯಾಕ್ಷನ್ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರು ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಮೊಬೈಲ್‍ಗೆ ಬೀಪ್ ಶಬ್ದದ ಜೊತೆ ಅಲರ್ಟ್ ಮೆಸೇಜ್ ಬಂದಿದೆ.

ಬಿಜೆಪಿ ಮಾಜಿ ಶಾಸಕ ರಾಮಣ್ಣ ಲಮಾಣಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದ ವೇಳೆ ವಿಕೋಪ ಅಲರ್ಟ್ ಟ್ರಯಲ್ ಮೆಸೇಜ್ (Emergency Alert Message) ಬಂದಿದೆ. ಡಿಕೆಶಿ ಮೊಬೈಲ್ ಸೇರಿ ಏಕಕಾಲಕ್ಕೆ ಹತ್ತಾರು ಮೊಬೈಲ್ ಗಳು ಸದ್ದು ಮಾಡಿವೆ. ಕೈ ನಾಯಕರು ಕೊಂಚ ಗಲಿಬಿಲಿಯಾಗಿದ್ದಾರೆ.
ಕೂಡಲೇ ಮಾಧ್ಯಮದವರು ವಿಕೋಪ ಮಾಹಿತಿ ಅಲಾರಂ ಎಂದು ಮಾಹಿತಿ ನೀಡಿದರು. ಈ ವೇಳೆ ಡಿಕೆಶಿ ಬಿಜೆಪಿಯವರೂ ಅಲರ್ಟ್ ಆಗಲಿ ಬಿಡಿ ಎಂದು ನಗುವ ಮೂಲಕ ಟಾಂಗ್ ಕೊಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!