ಹೊಸದಿಗಂತ ವರದಿ,ವಿಜಯಪುರ:
ವಿಶ್ವಕಪ್ ಕ್ರಿಕೆಟ್ ಪಂದ್ಯ ಹಿನ್ನೆಲೆ ಬೆಟ್ಟಿಂಗ್ ನಡೆಸುತ್ತಿದ್ದ ಮೂವರು ಕ್ರಿಕೆಟ್ ಬುಕ್ಕಿಗಳನ್ನು ಬಂಧಿಸಿರುವ ಘಟನೆ ನಗರದ ಮನಗೂಳಿ ರಸ್ತೆಯಲ್ಲಿ ನಡೆದಿದೆ.
ಇಲ್ಲಿನ ಕಿರಣ ನಾಯಕ, ಗೌಸಪಾಕ ಹಾವೇರಿ, ದಾವಲ್ ಪಟೇಲ್ ಬಂಧಿತರು.
ಈ ಬುಕ್ಕಿಗಳು ಇಂಡಿಯಾ ಹಾಗೂ ಅಫ್ಘಾನಿಸ್ತಾನ ವಿಶ್ವ ಕಪ್ ಪಂದ್ಯದಲ್ಲಿ ಇಂಡಿಯಾ ಗೆದ್ದರೆ ಒಂದು ಸಾವಿರಕ್ಕೆ ಮೂರು ಸಾವಿರ ಹಾಗೂ ಅಫ್ಘಾನಿಸ್ತಾನ ಗೆದ್ದರೆ ಒಂದು ಸಾವಿರಕ್ಕೆ ಎರಡು ಸಾವಿರ ಅಂತೆ ಬೆಟ್ಟಿಂಗ್ ಕಟ್ಟಿಸಿಕೊಳ್ಳುವಾಗ ಪೊಲೀಸರು ದಾಳಿಗೈದು 3170, ಬೆಟ್ಟಿಂಗ್ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂಬಂಧ ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.