ಹೊಸದಿಗಂತ ವರದಿ,ಮೈಸೂರು:
ಮಹಿಷ ದಸರಾವನ್ನ ಚಾಮುಂಡಿ ಬೆಟ್ಟದಲ್ಲಿ ಮಾಡುವುದಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಡಳಿತ ಮಹಿಷ ದಸರಾ ಆಚರಣೆ ಮತ್ತು ಚಾಮುಂಡಿ ಚಲೋ ಎರಡಕ್ಕೂ ಅನುಮತಿ ಕೊಟ್ಟಿಲ್ಲ.ಮೈಸೂರು ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆ ಮೇಲೆ ನಮಗೆ ನಂಬಿಕೆ ಇದೆ ಎಂದರು.
ಚಾಮುಂಡಿ ಬೆಟ್ಟಕ್ಕೆ ತನ್ನದೇ ಆದ ಪಾವಿತ್ರೆತೆ ಇದೆ. ಅದನ್ನು ಹಾಳು ಮಾಡಬಾರದು.ನಾನು ಯಾರ ಒತ್ತಡಕ್ಕೂ ಮಣಿದಿಲ್ಲ.
ಪಕ್ಷಕ್ಕಾಗಿ ಕಳೆದ ೩೮ ವರ್ಷ ದುಡಿಯುತ್ತಿದ್ದೇನೆ.ನಾವು ಒಂದು ಸಿದ್ದಾಂತಕ್ಕಾಗಿ ಕೆಲಸ ಮಾಡುತ್ತಿದ್ದೇವೆ.
ಸ್ವತಃ ಸಿಎಂ ಪತ್ನಿಯೇ ಜನ ಸಾಮಾನ್ಯರಂತೆ ಚಾಮುಂಡಿಬೆಟ್ಟಕ್ಕೆ ಬಂದು ಚಾಮುಂಡಿ ತಾಯಿಯ ದರ್ಶನ ಪಡೆದು ಹೋಗುತ್ತಾರೆ.
ಪ್ರಧಾನಿ, ರಾಷ್ಟçಪತಿಗಳು ಬಂದು ಹೋಗಿರುವ ಪವಿತ್ರ ಸ್ಥಳ ಚಾಮುಂಡಿ ಬೆಟ್ಟ. ಹಾಗಾಗಿ ಅಲ್ಲಿನ ಪಾವಿತ್ರತೆ ಹಾಳು ಮಾಡುವ ಕೆಲಸ ಮಾಡಬಾರದು ಎಂದರು. ಒಂದು ವೇಳೆ ಜಿಲ್ಲಾಡಳಿತದ ಆದೇಶವನ್ನು ಮೀರಿ ಮಹಿಷಾ ದಸರಾವನ್ನು ಆಚರಣೆ ಮಾಡಿದರೆ
ನಾವು ಮುಂದೆ ಏನು ಮಾಡಬೇಕೆಂದು ಪಕ್ಷದ ಮುಖಂಡರ ಜೊತೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.