ಹೊಸ ದಿಗಂತ ವರದಿ, ಹೊನ್ನಾವರ:
ಹೊನ್ನಾವರ ತಾಲೂಕಿನ ಜನಕಡ್ಕಲ್ ನಲ್ಲಿ ಮನೆಗೆ ನುಗ್ಗಿದ ಹಾವನ್ನು ಸೆರೆ ಹಿಡಿಯುವಾಗ ಉರಗ ರಕ್ಷಕನಿಗೆ ಕಚ್ಚಿದ ಪರಿಣಾಮ ಅಸ್ವಸ್ಥಗೊಂಡು ಚಿಂತಾಜನಕ ಸ್ಥಿತಿಗೆ ತಲುಪಿದ ಘಟನೆ ನಡೆದಿದೆ.
ಅಸ್ವಸ್ಥಗೊಂಡ ವ್ಯಕ್ತಿ ಪಟ್ಟಣದ ಗಾಂಧಿ ನಗರ ನಿವಾಸಿ ವೃತ್ತಿಯಲ್ಲಿ ಆಟೋ ಚಾಲಕ ಉರಗ ರಕ್ಷಕ ಅಬುತಲಾ ಎಂದು ಗುರುತಿಸಲಾಗಿದೆ.
ಜನಕಡ್ಕಲ್ ನಲ್ಲಿ ಮನೆ ಆವಾರದಲ್ಲಿ ಹಾವಿಗೆ ಸಿಕ್ಕಿ ಹಾಕಿಕೊಂಡಿದ್ದ ಬಲೆ ಬಿಡಿಸುವಾಗ ಘಟನೆ ನಡೆದಿದೆ. ಇನ್ನೆನು ಬಲೆ ತಪ್ಪಿಸಿ ಕೊನೆಯದಾಗಿ ಹಾವಿನ ತಲೆ ಬಾಗದಲ್ಲಿರುವ ಬಲೆ ತೆಗೆಯುವಾಗ ವಿಷಜಂತು ಕಚ್ಚಿದೆ. ಆದರು ಸಹ ಅಬುತಲಾ ಎದೆಗುಂದದೆ ಹಾವು ಸೆರೆಹಿಡಿದಿದ್ದು, ಕೊನೆಗೆ ಅಸ್ವಸ್ಥಗೊಂಡಿದ್ದಾರೆ. ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ,ಹೆಚ್ಚಿನ ಚಿಕಿತ್ಸೆಗಾಗಿ ನೆರೆಯ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.