ಹೊಸದಿಗಂತ ವರದಿ, ಅಂಕೋಲಾ:
ಸ್ನೇಹಿತರೊಂದಿಗೆ ಪಿಕ್ ನಿಕ್ ಗೆ ಹೋಗಿದ್ದ ಯುವಕನೋರ್ವ ನದಿಯಲ್ಲಿ ಬಿದ್ದು ಕಣ್ಮರೆಯಾದ ಘಟನೆ ತಾಲೂಕಿನ ಹೊಸಕಂಬಿಯಲ್ಲಿ ಸಂಭವಿಸಿದೆ.
ಬೊಬ್ರವಾಡ ನಿವಾಸಿ ಸುಹಾಸ ನಾಯ್ಕ (30) ಎಂಬಾತನೇ ಗಂಗಾವಳಿ ನದಿ ನೀರಿನಲ್ಲಿ ಮುಳುಗಿ ನಾಪತ್ತೆಯಾದ ವ್ಯಕ್ತಿಯಾಗಿದ್ದು ಹೊಸಕಂಬಿ ಬಳಿ ಸ್ನೇಹಿತರ ಜೊತೆಗೆ ಪಿಕ್ ನಿಕ್ ಗೆ ಬಂದವನು ಯಾವುದೋ ಕಾರಣಕ್ಕೆ ನದಿಯ ನೀರಿನಲ್ಲಿ ಇಳಿದವನು ನೀರಿನ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿರುವುದಾಗಿ ತಿಳಿದು ಬಂದಿದೆ.
ಅಂಕೋಲಾ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ರವಿವಾರ ಸಂಜೆ ಹುಡುಕಾಟ ನಡೆಸಿದ್ದು ಕತ್ತಲಾಗುವ ವರೆಗೆ ಯಾವುದೇ ಸುಳಿವು ಸಿಗಲಿಲ್ಲ ಎನ್ನಲಾಗಿದೆ.