ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವುದೇ ರೀತಿಯ ಷರತ್ತುಗಳು ಇಲ್ಲದೆ ಒತ್ತೆಯಾಳುಗಳನ್ನು ಈಗಲೇ ಬಿಡುಗಡೆ ಮಾಡಿ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ.
ಇಸ್ರೇಲ್ ಹಾಗೂ ಹಮಾಸ್ ಬಂಡುಕೋರರ ನಡುವಿನ ಯುದ್ಧ ತೀವ್ರವಾಗಿದ್ದು, ಹಮಾಸ್ ಉಗ್ರರಿಗೆ ಒತ್ತೆಯಾಳುಗಳನ್ನು ಬಿಟ್ಟುಬಿಡುವಂತೆ ಗುಟೆರಸ್ ಕರೆ ನೀಡಿದ್ದಾರೆ.
ಎರಡು ಮಾನವೀಯ ಮನವಿಗಳನ್ನು ಮಾಡುತ್ತಿದ್ದೇನೆ, ಒತ್ತೆಯಾಳುಗಳನ್ನ ಷರತ್ತಿಲ್ಲದೆ ಬಿಡುಗಡೆ ಮಾಡಿ, ಜಾಗಾದ ನಾಗರಿಕರಿಗೆ ಮಾನವೀಯ ಸಹಾಯ ಮಾಡಲು ತ್ವರಿತ ಹಾಗೂ ಅಡೆತಡೆಯಿಲ್ಲದ ಪ್ರವೇಶ ನೀಡಬೇಕು. ಈ ಎರಡೂ ಮಾನವೀಯ ಮನವಿಗಳು, ಚೌಕಾಸಿ ಮಾಡಬೇಡಿ. ಇದು ಸರಿಯಾದ ಕೆಲಸ ಎಂದು ಗುಟೆರಸ್ ಹೇಳಿದ್ದಾರೆ.