ಹೊಸದಿಗಂತ ವರದಿ ಗದಗ:
ಸರ್ಕಾರಿ ಬಸ್ ಹಾಗೂ ಟಾಟಾ ಸುಮೋ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಐವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ನಡೆದಿದೆ.
ಕಲಬುರಗಿಯಿಂದ ಶಿರಹಟ್ಟಿ ಫಕ್ಕೀರೇಶ್ವರ ಮಠಕ್ಕೆ ಬರುತ್ತಿದ್ದ ವೇಳೆ ಬಸ್ ಹಾಗೂ ಟಾಟಾ ಸುಮೋ ನಡುವೆ ಡಿಕ್ಕಿ ಸಂಭವಿಸಿದೆ. ಇದರ ಪರಿಣಾಮ ಐವರು ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಂದು ಮಗು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಇಂದು ನಡೆದಿದೆ.
ಸಚಿನ್ ಕತ್ತಿ(31), ಶಿವಕುಮಾರ ಕಲಶೆಟ್ಟಿ(51), ಚಂದ್ರಲಕಾ ಕಲಶೆಟ್ಟಿ (42), ರಾಣಿ ಕಲಶೆಟ್ಟಿ (32),
ದ್ರಾಕ್ಷಾಯಿಣಿ ಕತ್ತಿ(33) ಸ್ಥಳದಲ್ಲೇ ಮೃತಪಟ್ಟಿದ್ದು, ಚಿಕಿತ್ಸೆ ಫಲಿಸದೆ ದಿಂಗಾಲೇಶ ಕಲಶೆಟ್ಟಿ(5) ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ವಿಷಯ ತಿಳಿದ ಕೂಡಲೇ ಫಕೀರ ದಿಂಗಾಲೇಶ್ವರ ಶ್ರೀಗಳು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಾದ ಅಲ್ಲಮಪ್ರಭು ಕಲಶೆಟ್ಟಿ, ಮಹೇಶ ಕತ್ತಿ, ಅನಿತಾ ಕತ್ರಿ ಎಂಬುವವರ ಆರೋಗ್ಯ ವಿಚಾರಸಿದ್ದು, ಭಕ್ತರ ದಾರುಣ ಸಾವಿನ ಸಂಗತಿ ತಿಳಿದು ಕಣ್ಣೀರಾಕಿದರು.