ಹೊಸದಿಗಂತ ಡಿಜಿಟಲ್ ಡೆಸ್ಕ್:
ಒತ್ತೆಯಾಳುಗಳ ಆರೋಗ್ಯದ ಬಗ್ಗೆ ನಮಗೆ ಕಾಳಜಿ ಇದೆ, ಅವರಿಗೆ ಹಿಂಸೆ ಕೊಡುತ್ತಿಲ್ಲ ಎನ್ನುವಂಥ ವಿಡಿಯೋವೊಂದನ್ನು ಹಮಾಸ್ ಉಗ್ರರು ಬಿಡುಗಡೆ ಮಾಡಿದ್ದಾರೆ.
ಇಸ್ರೇಲ್-ಹಮಾಸ್ ಉಗ್ರರ ನಡುವಿನ ಯುದ್ಧ ಆರಂಭವಾಗಿ 10 ದಿನಗಳೇ ಕಳೆದಿವೆ, ಇಸ್ರೇಲ್ನ ಕಿಬ್ಬುಟ್ಜ್ ರೀಮ್ನಲ್ಲಿ ನಡೆದ ಸೂಪರ್ನೋವಾ ಸುಕ್ಕೋಟ್ ಸಂಗೀತ ಉತ್ಸವದ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದ್ದರು. ದಾಳಿ ನಡೆಸಿ ಸಾಕಷ್ಟು ಜನರನ್ನು ಒತ್ತೆಯಾಳಾಗಿ ಹಮಾಸ್ ಉಗ್ರರು ಇರಿಸಿಕೊಂಡಿದ್ದರು. ಒತ್ತೆಯಾಳಾಗಿರುವ 21 ವರ್ಷದ ಯುವತಿಯ ವಿಡಿಯೋವನ್ನು ಉಗ್ರರು ಬಿಡುಗಡೆ ಮಾಡಿದ್ದಾರೆ.
ಇಸ್ರೇಲಿ ಯುವತಿ ಮಿಯಾ ಶೆಮ್ ಕೈಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ನಾವು ಒತ್ತೆಯಾಳುಗಳನ್ನು ಹಿಂಸಿಸುತ್ತಿಲ್ಲ, ಅವರ ಕಾಳಜಿ ವಹಿಸುತ್ತಿದ್ದೇವೆ ಎಂದು ತೋರಿಸುವ ರೀತಿಯ ವಿಡಿಯೋ ಇದಾಗಿದೆ.
⚡️Hamas has published a video of their troops “providing medical care to a female prisoner in Gaza, who was captured on the first day of the war” pic.twitter.com/TNW2REHkgp
— War Monitor (@WarMonitors) October 16, 2023
ದಯವಿಟ್ಟು ನನ್ನನ್ನು ಬಿಟ್ಟುಬಿಡಿ, ನನ್ನ ಕುಟುಂಬವನ್ನು ನೋಡಬೇಕು ಎಂದು ಶೋಹಮ್ ಕಣ್ಣೀರಿಟ್ಟಿದ್ದಾರೆ.