ಹೊಸದಿಗಂತ ಡಿಜಿಟಲ್ ಡೆಸ್ಕ್:
ದಪ್ಪ, ಉದ್ದ ಮತ್ತು ಸುಂದರ ಕೂದಲು ಬೇಕೆಂದು ಎಲ್ಲಾ ಹೆಣ್ಮಕ್ಕಳ ಬಯಕೆ. ಕೂದಲು ನಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಎಣ್ಣೆ ಹಚ್ಚುವುದು ಕೂದಲ ರಕ್ಷಣೆಯ ಒಂದು ಭಾಗ. ಇದರಿಂದ ಕೂದಲು ಮೃದು, ಹೊಳಪು, ಆರೋಗ್ಯವಾಗಿರಲು ಸಹಕಾರಿ. ಎಣ್ಣೆ ಹಚ್ಚುವ ಕ್ರಮದಲ್ಲಿ ಅನೇಕ ತಪ್ಪುಗಳನ್ನು ಮಾಡುತ್ತಾರೆ ಅವುಗಳನ್ನು ತಿಳಿಯೋಣ..
- ಎಣ್ಣೆ ಹಚ್ಚಿದ ಕೂಡಲೇ ತಲೆ ಕೂದಲಿಗೆ ಮಸಾಜ್ ಮಾಡಬೇಕು. ಹಾಗೆಯೇ ಬಿಡುವುದರಿಂದ ರಕ್ತ ಪರಿಚಲನೆ ಸರಿಯಾಗಿ ಆಗುವುದಿಲ್ಲ. ಇದು ಕೂದಲ ಆರೈಕೆಗೂ ಒಳ್ಳೆಯದಲ್ಲ
- ಎಣ್ಣೆ ಹಚ್ಚಿದ ತಲೆ ಬಾಚುವುದು ಒಳ್ಳೆಯದಲ್ಲ, ಇದು ಹೆಚ್ಚಿನ ಕೂದಲು ಉದುರುವುದಕ್ಕೆ ಅವಕಾಶ ಮಾಡಿಕೊಡುತ್ತದೆ.
- ಅನೇಕರು ತಲೆಗೆ ಎಣ್ಣೆ ಹಚ್ಚಿಕೊಂಡು ದಿನಗಟ್ಟಲೆ ಹಾಗೆಯೇ ಬಿಡುತ್ತಾರೆ. ಒಂದೋ ಎರಡೋ ದಿನ ಸರಿ ಆದರೆ ಒಂದು ವಾರ ಹಾಗೆ ಇಟ್ಟರೆ ತಲೆಯಲ್ಲಿ ಫಂಗಲ್ ಇನ್ ಫೆಕ್ಷನ್ ಹೆಚ್ಚುತ್ತದೆ. ಇದು ತಲೆಹೊಟ್ಟು, ಕೂದಲು ನಿರ್ಜೀವ ಮತ್ತು ದುರ್ಬಲಗೊಳ್ಳಲು ದಾರಿ ಮಾಡಿಕೊಡುತ್ತದೆ.
- ರಾತ್ರಿ ಮಲಗುವ ಮುನ್ನ ಎಣ್ಣೆಯನ್ನು ಹಚ್ಚಬಾರದು. ನೆತ್ತಿಯ ಮೇಲೆ ಫಂಗಲ್ ಸೋಂಕು ಹೆಚ್ಚಾಗಬಹುದು. ಆ ಎಣ್ಣೆಯು ದಿಂಬಿಗೆ ಅಂಟಿಕೊಳ್ಳುತ್ತದೆ ಮತ್ತು ಮುಖದ ಮೇಲೆ ಮೊಡವೆಗಳು ಮತ್ತು ಕಪ್ಪು ಕಲೆಗಳನ್ನು ಉಂಟುಮಾಡುತ್ತದೆ.
- ಎಣ್ಣೆ ಹಚ್ಚುವಾಗ ನೆತ್ತಿ ಮೇಲೆ ಗಟ್ಟಿಯಾಗಿ ಉಜ್ಜುವುದು ಒಳ್ಳೆಯದಲ್ಲ, ಕೂದಲು ಮೃದುತ್ವವನ್ನು ಕಳೆದುಕೊಂಡು ಒರಟಾಗುತ್ತದೆ.