ಈ ಕಾರಣಕ್ಕೆ ರಿಲೀಸ್ ಮುನ್ನ ಕೋರ್ಟ್ ಮೆಟ್ಟಿಲು ಏರಿದ ‘ಲಿಯೋ’ ತಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾ (Leo Movie) ಈಗಾಗಲೇ ರಿಲೀಸ್ ಮುನ್ನವೇ ಸದ್ದು ಮಾಡುತ್ತಿದ್ದು, ಈ ನಡುವೆ ‘ಲಿಯೋ’ ತಂಡ ಕೋರ್ಟ್ ಮೆಟ್ಟಿಲು ಏರಿದೆ.

ಇದಕ್ಕೆ ಕಾರಣ ತಮಿಳುನಾಡಿನಲ್ಲಿ ದಳಪತಿ ವಿಜಯ್ ಅಭಿಮಾನಿಗಳು ಹಬ್ಬ ಮಾಡೋಕೆ ರೆಡಿ ಆಗಿದ್ದಾರೆ. ಸ್ಟಾರ್ ಹೀರೋಗಳ ಸಿನಿಮಾ ರಿಲೀಸ್ ಆಗುತ್ತವೆ ಎಂದರೆ ಮುಂಜಾನೆ ಶೋ ಇದ್ದರೆ ಅಭಿಮಾನಿಗಳ ಖುಷಿ ಹೆಚ್ಚುತ್ತದೆ. ಅದಕ್ಕಾಗಿ ಈ ಚಿತ್ರಕ್ಕೆ ಮುಂಜಾನೆ 4 ಗಂಟೆಯಿಂದ ಶೋ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ಕೋರಿ ಮದ್ರಾಸ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಅಭಿಮಾನಿಗಳ ದೃಷ್ಟಿಯಿಂದ ಮುಂಜಾನೆ ಶೋ ತುಂಬಾನೇ ಮುಖ್ಯ ಎಂದು ಅವರು ಹೇಳಿದ್ದಾರೆ.

ಅಕ್ಟೋಬರ್ 20ರಿಂದ ಅಕ್ಟೋಬರ್ 24ರವರೆಗೆ ದಿನಕ್ಕೆ ಐದು ಶೋ ಪ್ರದರ್ಶನ ಮಾಡಲು ಅವಕಾಶ ನೀಡಬೇಕು. ‘ಲಿಯೋ’ ರಿಲೀಸ್ ದಿನದಂದು (ಅಕ್ಟೋಬರ್ 19) 4 ಗಂಟೆ ಶೋಗೆ ಅವಕಾಶ ನೀಡಬೇಕು ಎಂದು ಕೋರಲಾಗಿದೆ. ಶೀಘ್ರದಲ್ಲೇ ಈ ಅರ್ಜಿ ವಿಚಾರಣೆಗೆ ಬರಲಿದೆ ಎನ್ನಲಾಗುತ್ತಿದೆ.

ಈ ಮೊದಲು ತಮಿಳುನಾಡು ಸರ್ಕಾರದವರು ‘ಲಿಯೋ’ ಸಿನಿಮಾ ಪ್ರದರ್ಶನಕ್ಕೆ ಕೆಲವು ನಿಯಮಗಳನ್ನು ಜಾರಿಗೆ ತಂದಿತ್ತು. ಮುಂಜಾನೆ ಶೋಗಳನ್ನು ಪ್ರದರ್ಶನ ಮಾಡಲು ಸಾಧ್ಯವಿಲ್ಲ. ಬೆಳಿಗ್ಗೆ 9 ಗಂಟೆಯಿಂದ ಶೋ ಆರಂಭ ಮಾಡಬಹುದು ಎಂದು ಸುತ್ತೋಲೆಯಲ್ಲಿ ಹೇಳಿತ್ತು.

‘ಲಿಯೋ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರಕ್ಕೆ ಮುಂಜಾನೆ ಶೋ ಸಿಕ್ಕರೆ ಸಿನಿಮಾದ ಗಳಿಕೆ ಹೆಚ್ಚಲಿದೆ. ತಮಿಳುನಾಡು ಸರ್ಕಾರದ ಆದೇಶದಿಂದ ಚಿತ್ರದ ಗಳಿಕೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ‘ಲಿಯೋ’ ಚಿತ್ರಕ್ಕೆ ಲೋಕೇಶ್ ಕನಗರಾಜ್ ನಿರ್ದೇಶನ ಮಾಡುತ್ತಿದ್ದಾರೆ. ದಳಪತಿ ವಿಜಯ್, ತ್ರಿಶಾ ಕೃಷ್ಣನ್, ಅರ್ಜುನ್ ಸರ್ಜಾ, ಗೌತಮ್ ಮೆನನ್, ಪ್ರಿಯಾ ಆನಂದ್ ಮೊದಲಾದವರು ನಟಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!