ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್ 2023ರಲ್ಲಿ ಇಂದು ದಕ್ಷಿಣ ಆಫ್ರಿಕಾ ತಂಡ ನೆದರ್ಲೆಂಡ್ ತಂಡವನ್ನು ಎದುರಿಸುತ್ತಿದೆ. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.
ಆದ್ರೆ ಟಾಸ್ ನಂತರ ಮಳೆ ಬಂದ ಹಿನ್ನೆಲೆಯಲ್ಲಿ ಪಂದ್ಯ ತಂಡವಾಗಿದ್ದು, ಎರಡೂ ಇನ್ನಿಂಗ್ಸ್ನಿಂದ 14 ಓವರ್ಗಳನ್ನು ಕಡಿತ ಮಾಡಲಾಗಿದೆ. ಒಂದು ಇನ್ನಿಂಗ್ಸ್ನಲ್ಲಿ ತಲಾ 43 ಓವರ್ಗಳನ್ನು ಆಡಿಸಲಾಗುತ್ತದೆ.
ಏಳು ಓವರ್ ಕಡಿತ ಮಾಡಿರುವುದರಿಂದ ಪವರ್ ಪ್ಲೇ ಮತ್ತು ಬೌಲಿಂಗ್ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಮೊದಲ ಪವರ್ ಪ್ಲೇ 1-9ನೇ ಓವರ್‌ವರೆಗೆ, 10-35 ಎರಡನೇ ಮತ್ತು 36 ರಿಂದ 43ರಲ್ಲಿ 3ನೇ ಪವರ್ ಪ್ಲೇ ಇರಲಿದೆ. 3 ಬೌಲರ್ಗಳು ಗರಿಷ್ಠ 9 ಓವರ್ ಮತ್ತು ಇಬ್ಬರು ಗರಿಷ್ಠ 8 ಓವರ್ಗಳನ್ನು ಮಾತ್ರ ಮಾಡಬೇಕಿದೆ.