ಹೊಸದಿಗಂತ ವರದಿ ಕುಕನೂರು:
ರೈತನೋರ್ವನನ್ನು ಪಿಎಸ್‌ಐ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೆ ಹಲ್ಲೆ ನಡೆಸಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಕುಕನೂರು ತಾಲೂಕಿನ ಚಿಕೇನಕೊಪ್ಪಳದ ಮಹಾಂತಯ್ಯ ಹಲ್ಲೆಗೊಳಗಾದ ರೈತ.
ಪವನ ಶಕ್ತಿ ವಾಹನ ಓಡಾಡದಂತೆ ತಡೆದಿದ್ದ ರೈತ ಮಹಾಂತಯ್ಯಗೆ ಕುಕನೂರು ಪೊಲೀಸ್ ಠಾಣೆಯ ಪಿಎಸ್ಐ ಗುರುರಾಜ ಎಂಬುವವರು ಹಲ್ಲೆ ನಡೆಸಿದ್ದಾರೆ.
ಪವನಶಕ್ತಿ ರೆಕ್ಕೆ ಅಳವಡಿಸಲು ಬೃಹತ್ ವಾಹನಗಳ ಓಡಾಟದಿಂದಾಗಿ ಕೃಷಿ ಹಾಳಾಗುತ್ತದೆ ಎಂದು ರೈತ ವಿರೋಧ ಮಾಡಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪೊಲೀಸ್ ಅಧಿಕಾರಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.