ಹೊಸದಿಗಂತ ವರದಿ,ಮಡಿಕೇರಿ:
ಅಡುಗೆಯ ವಿಚಾರದಲ್ಲಿ ಮಗನೇ ತಂದೆಯನ್ನು ಹತ್ಯೆ ಮಾಡಿರುವ ಘಟನೆ ವೀರಾಜಪೇಟೆ ಸಮೀಪದ ನಾಂಗಾಲ ಗ್ರಾಮದಲ್ಲಿ ನಡೆದಿದೆ.
ನಾಂಗಾಲ ಗ್ರಾಮದ ನಿವಾಸಿ ಸಿ.ಕೆ.ಚಿಟ್ಟಿಯಪ್ಪ (63) ಎಂಬವರೇ ಕೊಲೆಯಾದವರಾಗಿದ್ದು, ಬುಧವಾರ ರಾತ್ರಿ ಅಡುಗೆ ಮಾಡುವ ವಿಚಾರದಲ್ಲಿ ಅವರ ಪುತ್ರ ದರ್ಶನ್ ತಮ್ಮಯ್ಯ (38) ನೊಂದಿಗೆ ಜಗಳ ನಡೆಯಿತೆನ್ನಲಾಗಿದೆ. ಈ ಸಂದರ್ಭ ದರ್ಶನ್ ತಮ್ಮಯ್ಯ ದೊಣ್ಣೆಯಿಂದ ಹೊಡೆದು ತಂದೆಯನ್ನು ಹತ್ಯೆ ಮಾಡಿರುವುದಾಗಿ ಹೇಳಲಾಗಿದೆ.
ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೊರೆತ ದೂರಿನ ಅನ್ವಯ ಸೋಮವಾರಪೇಟೆ ವಿಭಾಗದ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ವೀರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್.ಶಿವರುದ್ರಪ್ಪ, ಗ್ರಾಮಾಂತರ ಠಾಣಾಧಿಕಾರಿ ಸಿ.ಸಿ.ಮಂಜುನಾಥ್ ಮತ್ತು ಸಿಬ್ಬಂದಿಗಳು, ಅಪರಾಧ ಕೃತ್ಯ ಪತ್ತೆ ಅಧಿಕಾರಿಗಳ ವಿಶೇಷ ತಂಡ, ಆರ್‌ಎಫ್‌ಎಸ್
ಮೈಸೂರು ಘಟಕದ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ಆರೋಪಿಯನ್ನು ಬಂಧಿಸಿದ್ದಾರೆ.