ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ರೂಪುಗೊಂಡ ತೇಜ್ ಚಂಡಮಾರುತ ಬಲಗೊಳ್ಳುತ್ತಿದ್ದು, ಇಂದು (ಭಾನುವಾರ) ಮಧ್ಯಾಹ್ನದ ವೇಳೆಗೆ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಭಾರತೀಯ ಹವಾಮಾನ ಕೇಂದ್ರ (ಐಎಂಡಿ) ಹೇಳಿದೆ. ಇನ್ನೆರಡು ದಿನಗಳಲ್ಲಿ ಈ ಚಂಡಮಾರುತ ಯೆಮೆನ್ ಮತ್ತು ಒಮಾನ್ ತೀರಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ.
ಪ್ರಸ್ತುತ, ಈ ಚಂಡಮಾರುತವು ಓಮನ್ ಮತ್ತು ಯೆಮೆನ್ ಕರಾವಳಿಯತ್ತ ಚಲಿಸುತ್ತಿದ್ದು, ಚಂಡಮಾರುತದ ದಿಕ್ಕು ದಿಢೀರ್ ಬದಲಾವಣೆಯಾಗುವ ಸಾಧ್ಯತೆ ಇಲ್ಲ. ಈ ಕಾರಣದಿಂದಾಗಿ ಎಲ್ಲಿ ಭೂಕುಸಿತವಾಗುತ್ತದೆ ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಐಎಂಡಿ ಹೇಳಿದೆ. ನಮ್ಮ ದೇಶದ ಗುಜರಾತ್‌ನ ಮೇಲೆ ಚಂಡಮಾರುತ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು IMD ಭವಿಷ್ಯ ನುಡಿದಿದೆ. ಚಂಡಮಾರುತ ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸುತ್ತಿರುವುದರಿಂದ, ಇದು ಗುಜರಾತ್‌ನ ಪೂರ್ವ ಪ್ರದೇಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಡಿಮೆಯಿದೆ.
ಭಾರತದ ಕೆಲ ರಾಜ್ಯಗಳಲ್ಲಿ ಮಳೆಯ ಮುನ್ಸೂಚನೆ
ತೇಜ್ ಚಂಡಮಾರುತದ ಕಾರಣದಿಂದಾಗಿ ಕೆಳಗಿನ ಈ ರಾಜ್ಯಗಳಲ್ಲಿ ಅಕ್ಟೋಬರ್ 25 ರವರೆಗೆ ಲಘು, ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ ಎಂದಿ ಐಎಂಡಿ ಎಚ್ಚರಿಕೆ ನೀಡಿದೆ.
-ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ: ಅಕ್ಟೋಬರ್ 24 ಮತ್ತು 25 ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ.
-ದಕ್ಷಿಣ ಅಸ್ಸಾಂ: ಅಕ್ಟೋಬರ್ 25 ರಂದು ಭಾರೀ ಮಳೆಯೊಂದಿಗೆ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ.
-ಒಡಿಶಾದ ಕರಾವಳಿ ಜಿಲ್ಲೆಗಳು: 23 ರಂದು ಕೆಲವು ಸ್ಥಳಗಳಲ್ಲಿ ಮತ್ತು ಅಕ್ಟೋಬರ್ 24 ಮತ್ತು 25 ರಂದು ಹಲವೆಡೆ ಸಾಧಾರಣ ಮಳೆಯ ಮನ್ಸೂಚನೆ ಇದೆ.
-ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳು: ಅಕ್ಟೋಬರ್ 24 ಮತ್ತು 25 ರಂದು ಅನೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.