ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಜಾದ ವೆಸ್ಟ್ ಬ್ಯಾಂಕ್‌ನ ಜೆನಿನ್ ನಗರದಲ್ಲಿರುವ ಅಲ್-ಅನ್ಸಾರ್ ಮಸೀದಿ ಮೇಲೆ ಇಸ್ರೇಲ್ ಸೇನೆ ವೈಮಾನಿಕ ದಾಳಿ ನಡೆಸಿದ್ದು, ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದಿಗಳ ಅಡಗುತಾಣಗಳನ್ನು ಹೊಡೆದುರುಳಿಸಿದೆ.
ಈ ದಾಳಿ ಕುರಿತಾಗಿ ಹೇಳಿಕೆ ನೀಡಿರುವ ಇಸ್ರೇಲ್, ಉಗ್ರರು ಈ ಮಸೀದಿಯನ್ನು ದಾಳಿಗಳನ್ನು ಯೋಜಿಸಲು ಕಮಾಂಡ್ ಸೆಂಟರ್ ಆಗಿ ಬಳಸುತ್ತಿದ್ದರು. ಹಾಗಾಗಿ ಮಸೀದಿಯನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿದೆ.
ಅಲ್ಲದೆ ದಾಳಿಯಲ್ಲಿ ಹತ್ಯೆಯಾದ ಉಗ್ರರು ಹಲವಾರು ಭಯೋತ್ಪಾದಕ ದಾಳಿಗಳನ್ನು ನಡೆಸಿದ್ದು, ಹಲವೆಡೆ ದಾಳಿ ನಡೆಸಲು ಯೋಜನೆ ರೂಪಿಸಿದ್ದರು ಎಂದು ತಿಳಿಸಿದೆ.
ಆದರೆ ಈ ವೈಮಾನಿಕ ದಾಳಿಯಲ್ಲಿ ಮೃತರ ಸಂಖ್ಯೆ ಅಥವಾ ಗುರುತಿನ ವಿವರಗಳನ್ನು ಇಸ್ರೇಲ್ ಸೇನೆ ಬಹಿರಂಗಪಡಿಸಿಲ್ಲ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದಲ್ಲಿ ಇಸ್ರೇಲ್‌ನ 1,400 ಜನರು ಸಾವನ್ನಪ್ಪಿದ್ದಾರೆ, ಗಾಜಾ ಪಟ್ಟಿಯಲ್ಲಿನ 4,469 ಮಂದಿ ಮೃತಪಟ್ಟಿದ್ದಾರೆ.