ಬರ ಪರಿಹಾರಕ್ಕಾಗಿ ವರದಿ ಸಲ್ಲಿಕೆ- ಕೇಂದ್ರ ಸಚಿವರ ಭೇಟಿಗೆ ಸಿಗುತ್ತಿಲ್ಲ ಅವಕಾಶ: ಸಚಿವ ಚೆಲುವರಾಯಸ್ವಾಮಿ

ಹೊಸದಿಗಂತ ವರದಿ ಹಾಸನ:

ಬರಪರಿಹಾರವಾಗಿ 5 ಸಾವಿರದ 21 ಕೋಟಿ ರೂ ನೀಡುವಂತೆ ಕೇಂದ್ರಕ್ಕೆ ವರದಿ ನೀಡಿದ್ದೇವೆ. ಆದರೆ ಕೇಂದ್ರ ಸರ್ಕಾರದ ಸಚಿವರು ಮತ್ತು ಕಾರ್ಯದರ್ಶಿಗಳು ಭೇಟಿ ಮಾಡಲು ಸಮಯ ನೀಡುತ್ತಿಲ್ಲ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.

ನಗರದ ಪ್ರವಾಸಿಮಂದಿರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೈಕೊಟ್ಟ ಮಳೆಯಿಂದ ರಾಜ್ಯದಲ್ಲಿ ಬರ ಆವರಿಸಿದ್ದು, ಮೊದಲ ಹಂತದಲ್ಲಿ 195 ತಾಲೂಕು ಹಾಗೂ ಎರಡನೇ ಹಂತದಲ್ಲಿ 21 ತಾಲೂಕುಗಳನ್ನು ಬರಪೀಡಿತ ತಾಲೂಕಾಗಿ ಸರ್ಕಾರ ಘೋಟಣೆ ಮಾಡಿದೆ. ಕೇಂದ್ರ ಬರ ಅಧ್ಯಯನ ತಂಡವೂ ಭೇಟಿ ನೀಡಿ ಹೋಗಿದೆ. ಬರಪರಿಹಾರವಾಗಿ 5 ಸಾವಿರದ 21 ಕೋಟಿ ರೂ ನೀಡುವಂತೆ ಕೇಂದ್ರಕ್ಕೆ ವರದಿ ನೀಡಿದ್ದೇವೆ. ಕೇಂದ್ರ ಸರ್ಕಾರದ ಸಚಿವರನ್ನು, ಕಾರ್ಯದರ್ಶಿಗಳನ್ನು ಭೇಟಿ ಮಾಡಲು ನಾನು ಮತ್ತು ಸಚಿವ ಕೃಷ್ಣೆಬೈರೈಗೌಡರು ಸಮಯ ಕೇಳಿದ್ದೇವೆ. ಆದರೆ ಕೇಂದ್ರ ಸಚಿವರು ಸಮಯ ನೀಡುತ್ತಿಲ್ಲ. ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರ ಪರ್ಸೆಂಟೇಜ್‌ ಆಡಳಿತ ನಡೆಸುತ್ತಿದೆ, ಆದ್ದರಿಂದ ವಿದ್ಯುತ್ ಅಭಾವ ಸೃಷ್ಠಿಯಾಗಿದೆ‌ ಎಂಬ ಮಾಜಿ ಸಿಎಂ ಕುಮಾರಸ್ವಾಮಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಚಿವರು, ಕುಮಾರಸ್ವಾಮಿಯವರು ಅತ್ಯಂತ ಪ್ರಭಾವಿ ವ್ಯಕ್ತಿಗಳು, ಅವರು ಸಹ ಎರಡು ಭಾರಿ ಅಧಿಕಾರ ನಿರ್ವಹಿಸಿದ್ದಾರೆ. ಅವರ ಆಡಳಿತವನ್ನು ಒಂದು ಭಾರಿ ಜೊತೆಯಲಿದ್ದು ನೋಡಿದ್ದೇನೆ, ಇನ್ನೊಂದು ಭಾರಿ ದೂರದಿಂದಲೆ ನೋಡಿದ್ದೇನೆ. ಕುಮಾರಸ್ವಾಮಿಯವರು ಏನಾದರು ಇದ್ದರೆ ಸಲಹೆ ನೀಡಲಿ, ಅವರು ಗಣ್ಯರಿದ್ದಾರೆ, ಸಾರ್ವಜನಿಕರಿಗೆ ಅನುಕೂಲವಾಗುವುದಾದರೆ ಅವರ ಸಲಹೆಗಳನ್ನು ಈಡೇರಿಸೋಣ ಎಂದು ಟಾಂಗ್‌ ನೀಡಿದರು.

ಕಾಂಗ್ರೆಸ್‌ ಪಕ್ಷದಲ್ಲಿ ಯಾವುದೇ ಬಿನ್ನಾಭಿಪ್ರಾಯವಿಲ್ಲ

ಸಭೆ ನಡೆಯುವಾಗ ಚರ್ಚೆ ನಡೆಯುವುದು ಸಾಮಾನ್ಯ, ಅಷ್ಟಕ್ಕೆ ಭಿನ್ನಾಭಿಪ್ರಾಯ ಎನ್ನುವುದು ಸರಿಯಲ್ಲ. ಕಾಂಗ್ರೆಸ್‌ ಪಕ್ಷ ಕಳೆದ ಚುನಾವಣೆಯಲ್ಲಿ ಸ್ವಲ್ಪ ಎಡವಿದೆ. ಮುಂದಿನ ಲೋಕಾಸಭಾ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಕಾಣಲಿದ್ದೇವೆ. ಕಾಂಗ್ರೆಸ್‌ ಪಕ್ಷದಲ್ಲಿ ಯಾವುದೇ ಬಿನ್ನಾಭಿಪ್ರಾಯವಿಲ್ಲ. ಚುನಾವಣೆ ಮೊದಲು ಡಿಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಟಿಕೆಟ್‌ ವಿಚಾರದಲ್ಲಿ ಕಿತ್ತಾಡುತ್ತಾರೆ ಎಂದು ಹೇಳಿದರು. ಆದರೆ ಅವರಿಬ್ಬರು ಒಮ್ಮತದಿಂದ ಚುನಾವಣೆ ನಡೆಸಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂತು. ಈಗ ಉತ್ತಮ ಆಡಳಿತ ನಡೆಸುತ್ತೆ, ನೀಡಿದ ಭರವಸೆಗಳನ್ನು ಈಡೇರಿಸುತ್ತಿದೆ, ಬರಗಾಲವನ್ನು ಎದುರುಸುತ್ತಿದ್ದೇವೆ, ಇದರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಾಸನ ಜಿಲ್ಲೆಯಲ್ಲಿ 131.62 ಕೋಟಿ ಬೆಳೆ ನಷ್ಟ

ಇಡೀ ರಾಜ್ಯದಲ್ಲಿ 5 ಸಾವಿರದ 21 ಕೋಟಿ ರೂ ಬೆಳೆಹಾನಿ ವರದಿಯಾಗಿದ್ದರೆ, ಹಾಸನ ಜಿಲ್ಲೆಯ ಎಂಟು ತಾಲೂಕುಗಳಲ್ಲಿ 131.62 ಕೋಟಿ ರೂ ಬೆಳೆ ನಷ್ಟದ ವರದಿ ನೀಡಲಾಗಿದೆ. ಹಾಸನ ಜಿಲ್ಲೆಯ ಏಳು ತಾಲೂಕುಗಳನ್ನು ಬರಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಸಕಲೇಶಪುರ ಸಾಧಾರಣ ಎಂದು ಘೋಷಣೆ ಮಾಡಲಾಗಿದೆ. ಅದನ್ನು ಸಹ ಪೂರ್ಣ ಬರವೆಂದು ಘೋಷಣೆ ಮಾಡಲಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!