ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದಲ್ಲಿ ಹಿಂದು ದೇಗುಲಗಳಲ್ಲಿ ನವರಾತ್ರಿ ಹಬ್ಬ ಅದ್ಧೂರಿಯಾಗಿ ಆಚರಿಸಲಾಗಿದೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನೀಶ್ ಕನೇರಿಯಾ ಕುಟುಂಬ ಸಮೇತರಾಗಿ ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಇಷ್ಟೇ ಅಲ್ಲ ಗರ್ಬಾ ನೃತ್ಯದಲ್ಲೂ ಪಾಲ್ಗೊಂಡು ಜಗದಾಂಬೆಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
9 ದಿನಗಳ ನವರಾತ್ರಿ ಹಬ್ಬ ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ. ಪಾಕಿಸ್ತಾನದ ಐತಿಹಾಸಿಕ ಹಿಂದ ದೇಗುಲದಲ್ಲಿ ನವರಾತ್ರಿ ಪೂಜೆ ನಡೆಯುತ್ತಿದೆ. ಇಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ಧಾನೀಶ್ ಕನೇರಿಯಾ ಕುಟುಂಬ ಸಮೇತ ನವರಾತ್ರಿ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ.
https://publictv.in/category/news/
ದೇವಸ್ಥಾನದಲ್ಲಿ ದುರ್ಗಾ ದೇವಿಯ ಪೂಜೆಯಲ್ಲಿ ಆರತಿ ಬೆಳಗಿದ ಧಾನೀಶ್ ಕನೇರಿಯಾ, ಭಜನೆ ಮೂಲಕ ದೇವರ ಸ್ಥುತಿ ಮಾಡಿದ್ದಾರೆ. ಇದಕ್ಕೂ ಮೊದಲು ಗರ್ಬಾ ನೃತ್ಯದಲ್ಲಿ ಪಾಲ್ಗೊಂಡಿದ್ದಾರೆ. ಪೂಜೆ ಹಾಗೂ ಗರ್ಬಾ ನೃತ್ಯದ ವಿಡಿಯೋಗಳನ್ನು ದಾನೀಶ್ ಕನೇರಿಯಾ ಹಂಚಿಕೊಂಡಿದ್ದಾರೆ.
ಪಾಕಿಸ್ತಾನ ಪರ ಆಡಿದ ಹಿಂದು ಕ್ರಿಕೆಟಿಗ ದಾನೀಶ್ ಕನೇರಿಯಾ ಭಾರತ ಕುರಿತು ವಿಶೇಷ ಒಲವು ಹಾಗೂ ಗೌರವ ಹೊಂದಿದ್ದಾರೆ. ಹಿಂದುತ್ವ, ಹಿಂದು ಆಚರಣೆಗಳ ಕುರಿತು ಟ್ವೀಟ್ ಮೂಲಕ ಬೆಂಬಲ ವ್ಯಕ್ತಪಡಿಸಿ ಭಾರತೀಯರಿಗೆ ಹತ್ತಿರವಾಗಿದ್ದಾರೆ.