ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ (Shivarajkumar) ಅವರು ಕಾವೇರಿ ನೀರಿನ ಬಗ್ಗೆ ಮಾತನಾಡಿದ್ದು, ಸರ್ಕಾರಕ್ಕೆ ನೀರಿನ ಸಮಸ್ಯೆ ಬಗ್ಗೆ ಒತ್ತಡ ತರಬೇಕು ಎಂದು ಹೇಳಿದ್ದಾರೆ.
ಕಾವೇರಿ ನೀರಿನ ವಿಚಾರದ ಕುರಿತು ಮಾತನಾಡಿದ ಶಿವಣ್ಣ, ಸರ್ಕಾರಕ್ಕೆ ನಾವು ಒತ್ತಡ ತರಬೇಕು. ಯಾವ ರೀತಿ ತರಬೇಕು ಅನ್ನೋದನ್ನು ಎಲ್ಲರೂ ತೀರ್ಮಾನ ಮಾಡಬೇಕು. ಎರಡೂ ಸರ್ಕಾರ ಸೇರಿ ಮಾಡಿದ್ರೆ ಸಮಸ್ಯೆ ಬಗೆಹರಿಯುತ್ತದೆ. ಕೇಂದ್ರ ಮಧ್ಯೆ ಪ್ರವೇಶ ಮಾಡಿದ್ರೆ ಮಾತ್ರ ಸಮಸ್ಯೆ ಇತ್ಯರ್ಥ ಆಗುತ್ತದೆ ಎಂದಿದ್ದಾರೆ.
ಇನ್ನು ರಾಜಕೀಯಕ್ಕೆ (Politics) ಬರುವ ಬಗ್ಗೆ ತಮ್ಮ ನಿಲುವು ಏನು ಎಂಬುದನ್ನು ಹೇಳಿದ ಅವರು, ನಾನು ರಾಜಕೀಯಕ್ಕೆ ಬರಲ್ಲ. ಗೀತಾ ರಾಜಕೀಯಕ್ಕೆ ಬರ್ತಾರೆ. ಅವರು ಯಾವ ಕ್ಷೇತ್ರದಲ್ಲಿ ಸ್ವರ್ಧೆ ಮಾಡ್ತಾರೋ ಗೊತ್ತಿಲ್ಲ. ಆದರೆ, ಖಂಡಿತವಾಗಿಯೂ ಸ್ಪರ್ಧೆ ಮಾಡ್ತಾರೆ. ಅವರ ಜೊತೆ ನಾನು ಇದ್ದೆ ಇರ್ತೀನಿ ಎಂದಿದ್ದಾರೆ.