ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಕಿರುತೆರೆಯಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಸೀಸನ್-10 ರಿಯಾಲಿಟಿ ಶೋ ಬಹಳ ಜನಮನ್ನಣೆ ಪಡೆಯುತ್ತಿದೆ. ಈ ನಡುವೆ ದಸರಾ ಹಬ್ಬದ ಪ್ರಯುಕ್ತ ಬಿಗ್ಬಾಸ್ ಮನೆಗೆ ನಟಿ ತಾರಾ ಪ್ರವೇಶಿಸಿದ್ದಾರೆ.
ಬಿಗ್ಬಾಸ್ ಮನೆಯ ಮಂದಿ ತಾರಾ ಅವರನ್ನು ಮನೆಗೆ ಸ್ವಾಗತಿಸಿ, ಅವರೊಂದಿಗೆ ಹಬ್ಬದ ವಾತಾವರಣವನ್ನು ಸಂತಸದಿಂದ ಕಳೆಯುತ್ತಿರುವ ಪ್ರೋಮೊವನ್ನು ವಾಹಿನಿಯು ಬಿಡುಗಡೆ ಮಾಡಿದೆ.
ಪ್ರೋಮೋದಲ್ಲಿ ನಟಿ ತಾರಾ ಬಿಗ್ಬಾಸ್ ಮನೆಯ ಮಂದಿಯೊಂದಿಗೆ ಹಬ್ಬದ ಆಚರಣೆ ಜೊತೆಗೆ ಸಖತ್ ಮನೊರಂಜನೆಯನ್ನು ಕೂಡ ನೀಡಿದ್ದಾರೆ. ಈ ಕ್ಷಣಗಳನ್ನು ಬಿಗ್ಬಾಸ್ ಮನೆ ಮಂದಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಸಂಚಿಕೆಯು ಇಂದು ವಾಹಿನಿಯಲ್ಲಿ ಪ್ರಸಾರವಾಗಲಿದ್ದು, ನೀವೂ ವೀಕ್ಷಿಸಬಹುದು.