Sunday, December 3, 2023

Latest Posts

ದೇವರಗಟ್ಟು ಬನ್ನಿ ಉತ್ಸವಕ್ಕೆ ಕ್ಷಣಗಣನೆ: ಹದ್ದಿನ ಕಣ್ಣಿಟ್ಟ ಪೊಲೀಸರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕರ್ನೂಲ್ ಜಿಲ್ಲೆಯ ಹೊಳಗುಂದ ಮಂಡಲದ ದೇವರಗಟ್ಟು ಅರಣ್ಯದ ಬೆಟ್ಟದ ಮೇಲಿರುವ ಶ್ರೀ ಮಲೆ ಮಲ್ಲೇಶ್ವರ ಸ್ವಾಮಿ ಬನ್ನಿ ಉತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ದಸರಾ ನಂತರ ಸ್ವಾಮಿಯ ಕಲ್ಯಾಣೋತ್ಸವ ಜರುಗಲಿದ್ದು, ದೇವರ ಮೆರವಣಿಗೆ ಸಮಯದಲ್ಲಿ ಕೋಲು ಕಾಳಗ ನಡೆಯುವುದು ಸಂಪ್ರದಾಯ. ದೇವರಗಟ್ಟುವಿನಲ್ಲಿ ಬನ್ನಿ ಹಬ್ಬದಂದು ನಡೆಯುವ ʻಕರ್ರಲ ಸಮರʼಕ್ಕೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಬಿಗಿ ಭದ್ರತೆ ಏರ್ಪಡಿಸಿದ್ದಾರೆ.

ಎರಡು ಗುಂಪುಗಳ ನಡುವೆ ನಡೆಯುವ ಕೋಲು ಕಾಳಗ ಸಂಘರ್ಷವಲ್ಲ..ಇದೊಂದು ಸಂಪ್ರದಾಯ ಅಂತಾರೆ ಅಲ್ಲಿನ ಭಕ್ತರು.  ದಸರಾ ಹಬ್ಬ ಮುಗಿದ ಮರುದಿನವೇ ದೇವರಗಟ್ಟು ಕದನ ಪ್ರಾರಂಭವಾಗುತ್ತದೆ. ಶ್ರೀಮಂತ ಇತಿಹಾಸವಿರುವ ಮಲೆ ಮಲ್ಲೇಶ್ವರಸ್ವಾಮಿಯ ಕಲ್ಯಾಣೋತ್ಸವಕ್ಕೆ ವೇದಿಕೆ ಸಜ್ಜಾಗಿದೆ. ಒಂದೆಡೆ ಕೋಲು ಕಾಳಗಕ್ಕೆ ಜನ ಸಜ್ಜಾಗಿದ್ದರೆ, ಇನ್ನೊಂದೆಡೆ ಪೊಲೀಸರು ಕಾವಲು ಹೆಚ್ಚಿಸಿದ್ದಾರೆ. ಮಧ್ಯರಾತ್ರಿಯಿಂದಲೇ ಹೆಚ್ಚಿನ ವೋಲ್ಟೇಜ್ ಇರಲಿದೆ.

ಬನ್ನಿ ಉತ್ಸವಕ್ಕೂ ಮುನ್ನ ನೆರಿಣಿಕಿ ಮತ್ತು ಕೊತಪೇಟ್ ಗ್ರಾಮಗಳ ಭಕ್ತರು ದೀಕ್ಷೆ ತೆಗೆದುಕೊಳ್ಳುತ್ತಾರೆ. ಉತ್ಸವಗಳು ಮುಗಿಯುವವರೆಗೂ ಬಹಳ ಶ್ರದ್ಧಾಭಕ್ತಿಯಿಂದ ದೀಕ್ಷೆಯನ್ನು ನಡೆಸಲಾಗುತ್ತದೆ. ಮಲೆ ಮಲ್ಲೇಶ್ವರಿ ಸ್ವಾಮಿಯ ಕಲ್ಯಾಣೋತ್ಸವದ ನಂತರ ಉತ್ಸವ ಮೂರ್ತಿಗಳನ್ನು ಸ್ಥಳಾಂತರಿಸುವ ಸಲುವಾಗಿ ಕೋಲು ಕಾಳಗ ನಡೆಯುತ್ತದೆ. ಉತ್ಸವ ವಿಗ್ರಹಗಳು ಸಿಂಹಾಸನದ ದ್ವಾರವನ್ನು ತಲುಪಿದ ನಂತರ ಬನ್ನಿ ಉತ್ಸವಕ್ಕೆ ತೆರೆಬೀಳುತ್ತದೆ.

ಮಲೆ ಮಲ್ಲೇಶ್ವರಸ್ವಾಮಿ ದಸರಾ ಆಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿದ್ದಾರೆ. ಸುಮಾರು 2000 ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಅಲ್ಲದೆ, 100 ಕಂದಾಯ, 100 ವಿದ್ಯುತ್ ಇಲಾಖೆ ಸಿಬ್ಬಂದಿ, 100 ಕ್ಕೂ ಹೆಚ್ಚು ಔಷಧ ಮತ್ತು ವೈದ್ಯಕೀಯ ಆರೋಗ್ಯ ಸಿಬ್ಬಂದಿ ಮತ್ತು ಗ್ರಾಮೀಣ ನೀರು ಸರಬರಾಜು ಸಿಬ್ಬಂದಿ ಕೂಡ ಕರ್ತವ್ಯ ನಿರ್ವಹಿಸಲಿದ್ದಾರೆ. ಈ ಗಲಾಟೆಯಲ್ಲಿ ಗಾಯಗೊಂಡ ಭಕ್ತರ ಚಿಕಿತ್ಸೆಗಾಗಿ 100 ಹಾಸಿಗೆಗಳ ತಾತ್ಕಾಲಿಕ ಆಸ್ಪತ್ರೆಯನ್ನು ಸಹ ಸ್ಥಾಪಿಸಲಾಗಿದ್ದು, ಆಂಬ್ಯುಲೆನ್ಸ್‌ಗಳನ್ನು ಸಿದ್ಧವಾಗಿ ಇರಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!