ಸಲ್ಮಾನ್ ಖಾನ್ ಒಬ್ಬ ಸುಳ್ಳುಗಾರ: ಬಾಲಿವುಡ್ ಹಿರಿಯ ನಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್​ ನಟ ಸಲ್ಮಾನ್ ಖಾನ್ (Salman Khan) ಅಂದರೆ ಎಷ್ಟು ಅಚ್ಚುಮೆಚ್ಚು ಅಷ್ಟೇ ಅವರನ್ನು ವಿರೋಧಿಸುವವರು ಇದ್ದಾರೆ.

ಇದೀಗ ಬಾಲಿವುಡ್​ನ ಮಾಜಿ ನಾಯಕ ನಟ ಸಲ್ಮಾನ್ ಖಾನ್ ಒಬ್ಬ ಸುಳ್ಳುಗಾರ ಎಂದು ಕರೆದಿದ್ದಾರೆ. ‘ಕುಚ್​ ಕುಚ್ ಹೋತಾ ಹೈ’ ಸಿನಿಮಾದ ಬಗ್ಗೆ ಮಾತನಾಡುತ್ತಾ ಸಲ್ಮಾನ್ ಖಾನ್ ಹೇಳಿದ ಮಾತುಗಳ ಬಗ್ಗೆ ಆ ಹಿರಿಯ ನಟ ಆಕ್ಷೇಪ ಎತ್ತಿದ್ದಾರೆ.
‘ಕುಚ್​ ಕುಚ್ ಹೋತಾ ಹೈ’ ಸಿನಿಮಾ ಬಿಡುಗಡೆ ಆಗಿ 25 ವರ್ಷಗಳಾಗಿವೆ. ಸಿನಿಮಾದಲ್ಲಿ ಸಲ್ಮಾನ್ ಖಾನ್ ಸಹ ನಟಿಸಿದ್ದು, ಸಿನಿಮಾ ಬಗ್ಗೆ ಸಲ್ಮಾನ್ ಖಾನ್ ಈ ಹಿಂದೆ ಕಾಫಿ ವಿತ್ ಕರಣ್ ಶೋನಲ್ಲಿ ಆಡಿದ್ದ ಮಾತುಗಳು ಇದೀಗ ಮತ್ತೆ ವೈರಲ್ ಆಗಿವೆ. ಅಂದು ಸಲ್ಮಾನ್ ಖಾನ್ ಆಡಿದ್ದ ಮಾತುಗಳ ಬಗ್ಗೆ ಬಾಲಿವುಡ್​ನ ಮಾಜಿ ನಾಯಕ ನಟ ಚಂದ್ರಚೂರ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾಫಿ ವಿತ್ ಕರಣ್​ನಲ್ಲಿ ಈ ಹಿಂದೆ ಮಾತನಾಡಿದ್ದ ಸಲ್ಮಾನ್ ಖಾನ್, ”ಕುಚ್​ ಕುಚ್ ಹೋತಾ ಹೈ ಸಿನಿಮಾದ ಅಮನ್ ಪಾತ್ರವನ್ನು ಯಾರೂ ಮಾಡಲು ತಯಾರಿರಲಿಲ್ಲ, ಕೆಲವರನ್ನು ಕೇಳಿ ಇಲ್ಲ ಅನಿಸಿಕೊಂಡ ಬಳಿಕ ನನ್ನ ಬಳಿ ನೀನು (ಕರಣ್ ಜೋಹರ್) ಬಂದೆ. ಸೈಫ್ ಅನ್ನು ಕೇಳಿದ್ದೆ, ಚಂದ್ರಚೂಡ್ ಸಿಂಗ್ ಅನ್ನು ಕೇಳಿದ್ದೆ. ಅವರಿಬ್ಬರೂ ಆ ಸಮಯದಲ್ಲಿ ಯಾವ ಸಿನಿಮಾ ಮಾಡದಿದ್ದರೂ ಸಹ ನಿನ್ನ (ಕರಣ್) ಸಿನಿಮಾದಲ್ಲಿ ನಟಿಸಲು ಒಪ್ಪಿರಲಿಲ್ಲ. ಆದರೆ ಕರಣ್ ಪ್ರತಿಭೆಯ ಬಗ್ಗೆ ನನಗೆ ನಂಬಿಕೆ ಇತ್ತು ಹಾಗಾಗಿ ಅಮನ್ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡೆ ಎಂದಿದ್ದಾರೆ.

ಸಲ್ಮಾನ್​ ಖಾನ್​ರ ಈ ಮಾತುಗಳನ್ನು ಖಂಡಿಸಿರುವ ಚಂದ್ರಚೂಡ್ ಸಿಂಗ್ ಆತ ಒಬ್ಬ ಸುಳ್ಳುಗಾರ ಎಂದಿದ್ದಾರೆ. ರೆಡಿಟ್ ಸಾಮಾಜಿಕ ಜಾಲತಾಣದಲ್ಲಿ ‘ಸಲ್ಮಾನ್ ಖಾನ್ ಒಬ್ಬ ಸುಳ್ಳುಗಾರ’ ಎಂದು ಚಂದ್ರಚೂಡ್ ಸಿಂಗ್ ಬರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!