ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯದಶಮಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಕೇರಳದಲ್ಲೂಈ ದಿನದಂದು “ಎಝುತಿನಿರುತ್ತು” ದೀಕ್ಷಾ ಆಚರಣೆ ಮಾಡಲಾಗುತ್ತದೆ. ಇದನ್ನು “ವಿದ್ಯಾರಂಭಂ” ಎಂದು ಕೂಡ ಕರೆಯುತ್ತಾರೆ.
ಇಂದು ಕೇರಳದ ಅನೇಕ ಶಾಲೆಗಳಲ್ಲಿ, ದೇವಸ್ಥಾನಗಳಲ್ಲಿ ಇದನ್ನು ವಿದ್ಯಾರಂಭಂ ಆಚರಣೆ ಮಾಡುತ್ತಾರೆ. ಇದು ಹಿಂದು ಧರ್ಮ ಪೂಜಾ ಕಲಿಕೆಯ ಒಂದು ಪದ್ಧತಿಯಾಗಿದೆ. ಕೇರಳ ರಾಜಭವನದಲ್ಲೂ ವಿದ್ಯಾರಂಭಂ ಸಮಾರಂಭವನ್ನು ಆಯೋಜಿಸಿತ್ತು, ಅಲ್ಲಿ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಅವರು ಅಕ್ಕಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ್ದಾರೆ.
ವಿದ್ಯಾರಂಭಂ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡ ಭಾಗವಹಿಸಿದರು. ಜತೆಗೆ ಮಕ್ಕಳಿಗೆ ಅಕ್ಕಿಯಲ್ಲಿ ಅಕ್ಷರಾಭ್ಯಾಸವನ್ನು ಮಾಡಿಸಿದ್ದಾರೆ.