ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಸೆಲೆಬ್ರಿಟಿ ಕಪಲ್ ದೀಪಿಕಾ ಪಡುಕೋಣ್ ಹಾಗೂ ರಣ್‌ವೀರ್ ಸಿಂಗ್ ಮದುವೆ ವಿಡಿಯೋ ಇದೀಗ ರಿಲೀಸ್ ಆಗಿದೆ.
ಹೌದು, ಈ ಕಪಲ್ ಸಪ್ತಪದಿ ತುಳಿದು ಐದು ವರ್ಷಗಳೇ ಕಳೆದು ಹೋಗಿದೆ, ಇಟಲಿಯಲ್ಲಿ ದೀಪ್‌ವೀರ್ ಜೋಡಿ ಮದುವೆಯಾಗಿದ್ದು, ಐದು ವರ್ಷಗಳಾದ್ರೂ ವಿಡಿಯೋ ಎಲ್ಲಿಯೂ ರಿಲೀಸ್ ಮಾಡಿರಲಿಲ್ಲ.
ಆದರೆ ಇದೀಗ ಮದುವೆ ವಿಡಿಯೋ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋದಲ್ಲಿ ದೀಪಿಕಾ ಕುಟುಂಬ ರಣ್‌ವೀರ್ ಬಗ್ಗೆ ಮಾತನಾಡುತ್ತಾರೆ. ನಮ್ಮ ಫ್ಯಾಮಿಲಿಗೆ ರಣ್‌ವೀರ್ ಆಪೋಸಿಟ್ ಆದರೂ ಒಂದು ಬದಲಾವಣೆ ತಂದಿದ್ದಾರೆ ಎಂದು ಪ್ರಕಾಶ್ ಪಡುಕೋಣ್ ಹೇಳಿದ್ದಾರೆ.
ಇನ್ನು ರಣ್‌ವೀರ್ ಎಷ್ಟೋ ವರ್ಷಗಳ ಹಿಂದೆಯೇ ಮದುವೆ ಆಗುವುದಾದರೆ ದೀಪಿಕಾ ಪಡುಕೋಣ್‌ರನ್ನೇ ಮದುವೆ ಆಗುತ್ತೇನೆ ಎಂದು ಹೇಳಿದ್ದು, ಕೊಟ್ಟ ಮಾತಿನಂತೆಯೇ ನಡೆದುಕೊಂಡಿದ್ದೇನೆ ಎಂದು ಖುಷಿ ಪಟ್ಟಿದ್ದಾರೆ.
ದೀಪಿಕಾ ಕೂಡ ಮಾತನಾಡಿದ್ದು, ರಣ್‌ವೀರ್‌ಗೆ ನೀವ್ಯಾರೂ ನೋಡದ ಇನ್ನೊಂದು ಮುಖ ಇದೆ, ಅದು ನನಗೆ ಆಕರ್ಷಕವಾಗಿ ಕಂಡಿದೆ, ಅವನಿಗೆ ದುಃಖ ಆದ್ರೆ ಕಣ್ಣೀರು ಹಾಕೋಕೆ ಮುಜುಗರ ಪಡೋದಿಲ್ಲ, ಅದೂ ನನಗೆ ಇಷ್ಟ ಎಂದಿದ್ದಾರೆ.
ಫ್ಯಾನ್ಸ್ ಮಾತ್ರ ವಿಡಿಯೋ ನೋಡಿ ಭಾವುಕರಾಗಿದ್ದು, ಈ ಜೋಡಿಗೆ ದೃಷ್ಟಿ ಬೀಳದಿರಲಿ ಎಂದು ಹೇಳಿದ್ದಾರೆ.
https://www.instagram.com/reel/Cy1W8ZBLF5V/?utm_source=ig_web_copy_link