CINE| ವಿಕ್ಟರಿ ವೆಂಕಟೇಶ್‌ ಮನೆಯಲ್ಲಿ ಮದುವೆ ಸಂಭ್ರಮ, ಯಾರೆಲ್ಲಾ ಬಂದಿದ್ರು ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟಾಲಿವುಡ್ ಸ್ಟಾರ್ ವಿಕ್ಟರಿ ವೆಂಕಟೇಶ್‌ ಮನೆಯಲ್ಲಿ ಮದುವೆ ಸಂಭ್ರಮ ಮನೆಮಾಡಿದೆ. ವೆಂಕಟೇಶ್ ಮಗಳ ನಿಶ್ಚಿತಾರ್ಥ ಇಂದು ಅದ್ಧೂರಿಯಾಗಿ ನೆರವೇರಿದ್ದು, ಟಾಲಿವುಡ್‌ ನಟರು ಈ ಸಂಭ್ರಮದಲ್ಲಿ ಭಾಗಿಯಾದರು.

ವೆಂಕಟೇಶ್‌ಗೆ ಮೂವರು ಹೆಣ್ಣುಮಕ್ಕಳು, ಒಬ್ಬ ಗಂಡು ಮಗನಿದ್ದು, ಹಿರಿಯ ಪುತ್ರಿಗೆ ಈಗಾಗಲೇ ವಿವಾಹವಾಗಿದೆ. ಎರಡನೇ ಮಗಳಿಗೆ ಕಂಕಣ ಬಾಗ್ಯ ಕೂಡಿಬಂದಿದ್ದು, ಅದ್ದೂರಿಯಾಗಿ ನಿಶ್ಚಿರ್ತಾರ್ಥ ನೆರವೇರಸಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ದಗ್ಗುಬಾಟಿ ಕುಟುಂಬ ಸದಸ್ಯರು, ವರನ ಕುಟುಂಬ ಸದಸ್ಯರು ಮತ್ತು ಉದ್ಯಮದ ಆಪ್ತರು ಮಾತ್ರ ಭಾಗವಹಿಸಿದ್ದರು. ಚಿರಂಜೀವಿ ಮತ್ತು ಮಹೇಶ್ ಬಾಬು ಈ ನಿಶ್ಚಿತಾರ್ಥದಲ್ಲಿ ಭಾಗವಹಿಸಿ ನವ ದಂಪತಿಯನ್ನು ಆಶೀರ್ವದಿಸಿದರು. ಇದಕ್ಕೆ ಸಂಬಂಧಿಸಿದ ಫೋಟೋ ಇದೀಗ ವೈರಲ್ ಆಗಿದೆ. ವೆಂಕಟೇಶ್ ಮಗಳನ್ನು ಮದುವೆಯಾಗಲಿರುವ ಹುಡುಗ ವಿಜಯವಾಡದ ವೈದ್ಯರ ಕುಟುಂಬಕ್ಕೆ ಸೇರಿದ ಹುಡುಗ ಎನ್ನಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!