ಹೊಸದಿಗಂತ ವರದಿ,ಶಿವಮೊಗ್ಗ:
ಮಾಜಿ ಮುಖ್ಯಮಂತ್ರಿ ದಿ.ಎಸ್. ಬಂಗಾರಪ್ಪನವರ 90ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಸೊರಬ ಪಟ್ಟಣದ ಬಂಗಾರ ಧಾಮದಲ್ಲಿನ ಬಂಗಾರಪ್ಪನವರ ಸಮಾಧಿಗೆ ಸಚಿವ ಎಸ್. ಮಧು ಬಂಗಾರಪ್ಪ ಕುಟುಂಬ ಸಮೇತರಾಗಿ ಆಗಮಿಸಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಧು ಬಂಗಾರಪ್ಪ ಧರ್ಮ ಪತ್ನಿ ಅನಿತಾ ಮಧು ಬಂಗಾರಪ್ಪ, ಪುತ್ರ ಸೂರ್ಯ ಮಧು ಬಂಗಾರಪ್ಪ, ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷ ಡಿ.ಬಿ. ಅಣ್ಣಪ್ಪ, ಹೆಚ್. ಗಣಪತಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಉಪಾಧ್ಯಕ್ಷ ಸಂಜಯ್ ದೇವತಿಕೊಪ್ಪ, ರಾಜಶೇಖರ್ ಕುಪ್ಪೆಗಡ್ಡೆ, ಜಗದೀಶ್ ಕುಪ್ಪೆ, ಹಿರಿಯಣ್ಣ ಕಲ್ಲಂಬಿ, ಎಂ.ಡಿ. ಶೇಖರ್, ಸುಜಾತಾ ಜೊತಾಡಿ, ಚಂದ್ರಣ್ಣ ಅನವಟ್ಟಿ, ಸುರೇಶ್ ಹಾವಣ್ಣನವರ್, ಸಂಜೀವ್, ವಾಸು ಬಿಳಾಗಿ, ಪಾಂಡು ಕೊಡಕಣಿ, ನಂಜುಂಡ ಕಲ್ಲಂಬಿ, ಜಗದೀಶ್ ಕುಪ್ಪೆ, ಫಯಾಜ್ ಅಹ್ಮದ್, ರವಿಬರಗಿ. ಸತ್ಯನಾರಾಯಣ, ಸಂತೋಷ್ ಕೊಡಕಣಿ, ಶ್ರೀಕಾಂತ್ ಮತ್ತಿತರರಿದ್ದರು.