ಹೊಸದಿಗಂತ ಡಿಜಿಟಲ್ ಡೆಸ್ಕ್
ಅಸ್ಸಾಂ (Assam) ಸರ್ಕಾರವು ತನ್ನ ರಾಜ್ಯದಲ್ಲಿ ಸರ್ಕಾರಿ ನೌಕರರು (Government Employees) 2ನೇ ಮದುವೆಯಾಗುವುದನ್ನು ನಿರ್ಬಂಧಿಸಿದೆ.
ಸರ್ಕಾರಿ ನೌಕರನ ಧರ್ಮ 2ನೇ ಮದುವೆಗೆ (2nd Marriage) ಅನುಮತಿಸಿದರೂ ಸರ್ಕಾರದ ಅನುಮತಿ ಇಲ್ಲದೇ 2ನೇ ಮದುವೆ ಮಾಡಿಕೊಳ್ಳುವಂತಿಲ್ಲ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಹೇಳಿದ್ದಾರೆ.
ಇದಕ್ಕೆ ಕಾರಣ , 2 ಮದುವೆಗಳಿಂದ ಸರ್ಕಾರಿ ನೌಕರನ ಪಿಂಚಣಿಗಾಗಿ ಇಬ್ಬರು ಪತ್ನಿಯರು ಹೋರಾಟ ಮಾಡುವುದನ್ನು ನಾವು ಗಮನಿಸಿದ್ದೇವೆ. ಅಸ್ಸಾಂನಲ್ಲಿ ಈ ಕಾನೂನು ಮೊದಲೇ ಇತ್ತು. ಅದನ್ನು ಕಠಿಣವಾಗಿ ಜಾರಿಗೆ ನಿರ್ಧಾರ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಬಹುಪತ್ನಿತ್ವವನ್ನು ನಿಷೇಧಿಸುವ ಕಾನೂನು 58 ವರ್ಷಗಳ ಹಿಂದೆ ಅಸ್ಸಾಂನಲ್ಲಿ ಜಾರಿ ಮಾಡಲಾಗಿತ್ತು. ಮೊದಲ ಸಂಗಾತಿಯು ಜೀವಂತವಾಗಿರುವವರೆಗೆ ಸರ್ಕಾರದ ಒಪ್ಪಿಗೆಯಿಲ್ಲದೆ 2ನೇ ಮಹಿಳೆಯನ್ನು ಮದುವೆಯಾಗುವುದನ್ನು ಕಾನೂನು ನಿರ್ಬಂಧಿಸುತ್ತದೆ.
ಅಸ್ಸಾಂ ನಾಗರಿಕ ಸೇವೆಗಳ (ನಡತೆ) ನಿಯಮಗಳು 1965 ರ ನಿಯಮ 26 ರ ನಿಬಂಧನೆಗಳ ಪ್ರಕಾರ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ಅದು ಹೇಳಿದೆ. ಮೇಲಿನ ನಿಬಂಧನೆಗಳ ಅನ್ವಯ ಶಿಸ್ತು ಸಮಿತಿ ಪ್ರಾಧಿಕಾರವು ತಕ್ಷಣದ ಇಲಾಖಾ ಪ್ರಕ್ರಿಯೆಗಳನ್ನು ಪ್ರಾರಂಭಿಸಬಹುದು. ಕಡ್ಡಾಯ ನಿವೃತ್ತಿ ಸೇರಿದಂತೆ ಪ್ರಮುಖ ದಂಡವನ್ನು ವಿಧಿಸಲು ಆದೇಶದಲ್ಲಿ ಹೇಳಿದೆ.