Sunday, December 10, 2023

Latest Posts

ಪ್ಯಾರಾ ಏಷ್ಯನ್​ ಗೇಮ್ಸ್​​: ಶಟ್ಲರ್​ಗಳ ಚಿನ್ನದ ಬೇಟೆ

ಹೊಸದಿಗಂತ ಡಿಜಿಟಲ್ ಡೆಸ್ಕ್

4ನೇ ಪ್ಯಾರಾ ಏಷ್ಯನ್​ ಗೇಮ್ಸ್​​ 5ನೇ ದಿನವಾದ ಇಂದು (ಶುಕ್ರವಾರ) ದೇಶದ ಸ್ಪರ್ಧಿಗಳಿಂದ ಪದಕ ಬೇಟೆ ಸಾಗುತ್ತಿದೆ. ಶಟ್ಲರ್​ಗಳು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

ಪುರುಷರ ಡಬಲ್ಸ್​ ನಿತೇಶ್ ಕುಮಾರ್, ತರುಣ್ ಮತ್ತು ಸಿಂಗಲ್ಸ್​​ನಲ್ಲಿ ಪ್ರಮೋದ್ ಭಗತ್, ಸುಹಾಸ್ ಯತಿರಾಜ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಪುರುಷರ ಡಬಲ್ಸ್ ಎಸ್‌ಎಲ್ 3-ಎಸ್‌ಎಲ್ 4 ಸ್ಪರ್ಧೆಯಲ್ಲಿ ನಿತೇಶ್ ಕುಮಾರ್ ಮತ್ತು ತರುಣ್ ಜೋಡಿ ಚಿನ್ನ ಜಯಿಸಿತು. ಮೊದಲ ಸೆಟ್‌ನಲ್ಲಿ ಇಂಡೋನೇಷ್ಯಾದ ಫ್ರೆಡಿ ಮತ್ತು ದ್ವಿಯೊಕೊ ಜೋಡಿಯ ವಿರುದ್ಧ ಪಾಯಿಂಟ್ಸ್ ಪಡೆಯಲು ಹೆಣಗಾಡಿದರು.ಮೊದಲ ಸೆಟ್‌ ಅನ್ನು 21-9ರಿಂದ ಸೋತರು. ಆದರೆ ನಂತರದ ಎರಡನೇ ಸೆಟ್‌ಗಳಲ್ಲಿ ಕಮ್​ಬ್ಯಾಕ್​ ಮಾಡಿ 21-19 ಮತ್ತು 22-20 ಅಂತರದಲ್ಲಿ ಪಂದ್ಯ ಗೆದ್ದು ಸ್ವರ್ಣ ತಮ್ಮದಾಗಿಸಿಕೊಂಡರು.

ಪ್ರಮೋದ್ ಭಗತ್​ಗೆ ಚಿನ್ನ:
ಪುರುಷರ ಸಿಂಗಲ್ಸ್ ಎಸ್‌ಎಲ್ 3 ಸ್ಪರ್ಧೆಯಲ್ಲಿ ಪ್ರಮೋದ್ ಭಗತ್ ಇನ್ನೋರ್ವ ಭಾರತೀಯ ​ನಿತೇಶ್ ಕುಮಾರ್ ಅವರನ್ನು 2-1 ರಿಂದ ಮಣಿಸಿ ಚಿನ್ನಕ್ಕೆ ಮುತ್ತಿಕ್ಕಿದರು. ಪ್ರಮೋದ್ ಮೊದಲ ಸೆಟ್‌ನಲ್ಲಿ 22-20ರ ಅಂತರದ ಪ್ರಯಾಸದ ಗೆಲುವು ಸಾಧಿಸಿದರು. ನಿತೇಶ್ ಎರಡನೇ ಸೆಟ್‌ನಲ್ಲಿ ಪುಟಿದೇಳುವ ಮೂಲಕ 21-18 ಸ್ಕೋರ್‌ಲೈನ್‌ನೊಂದಿಗೆ ಪಂದ್ಯವನ್ನು ಸಮಸ್ಥಿತಿಗೆ ತಂದರು. ಪ್ರಮೋದ್ ನಿರ್ಣಾಯಕ ಸೆಟ್​ನಲ್ಲಿ 21-19 ಗೆಲುವಿನೊಂದಿಗೆ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ​ನಿತೇಶ್ ಕುಮಾರ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.

ಸುಹಾಸ್ ಯತಿರಾಜ್​ಗೂ ಬಂಗಾಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್‌ಎಲ್ 4 ಫೈನಲ್‌ನಲ್ಲಿ ಶಟ್ಲರ್ ಸುಹಾಸ್ ಯತಿರಾಜ್ ಭಾರತಕ್ಕೆ ಮತ್ತೊಂದು ಚಿನ್ನ ಗೆದ್ದುಕೊಂಡರು. ಮಲೇಷ್ಯಾದ ಬುರ್ಹಾನುದ್ದೀನ್ ಮೊಹಮ್ಮದ್ ಅಮಿನ್ ಅವರನ್ನು ಎದುರಿಸಿದ ಸುಹಾಸ್ ಮೊದಲ ಸೆಟ್‌ನಲ್ಲಿ ಪಾಯಿಂಟ್ ಗಳಿಸಲು ಹೆಣಗಾಡಿದರು.

ಅಮೀನ್ ಆರಾಮದಾಯಕವಾಗಿ 21-13ರಿಂದ ಮೊದಲ ಸೆಟ್​ ತಮ್ಮದಾಗಿಸಿಕೊಂಡರು. ಆದರೆ ನಂತರದ ಎರಡು ಸೆಟ್‌ಗಳಲ್ಲಿ ಸುಹಾಸ್ ತಮ್ಮ ಆಟದ ವೈಖರಿ ಬದಲಿಸಿದರು. ಮೊದಲ ಸೆಟ್‌ಗಿಂತ ಭಿನ್ನವಾಗಿ, ಪ್ರತಿ ಪಾಯಿಂಟ್‌ಗೆ ಅಮೀನ್‌ ಕಠಿಣ ಹೋರಾಟ ಕೊಟ್ಟ ಸುಹಾಸ್ ಎರಡನೇ ಸೆಟ್ ಅನ್ನು 21-18 ರಿಂದ ವಶಪಡಿಸಿಕೊಂಡರೆ, ನಿರ್ಣಾಯಕ ಸೆಟ್‌ನಲ್ಲಿ ಪ್ರಬಲವಾಗಿ ತಿರುಗಿಬಿದ್ದು 21-9 ಅಂತರದಿಂದ ಜಯ ಸಾಧಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!