ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಮಧ್ಯರಾತ್ರಿ ವರ್ಷದ ಕಡೆಯ ಚಂದ್ರಗ್ರಹಣ ಸಂಭವಿಸಲಿದ್ದು, ಗ್ರಹಣ ವೀಕ್ಷಣೆಗೆ ಬೆಂಗಳೂರಿನ ನೆಹರು ತಾರಾಲಯದಲ್ಲಿ ಅವಕಾಶ ಮಾಡಿಕೊಡಲಾಗಿದೆ.
ರಾತ್ರಿ 11:31 ರಿಂದ ಗ್ರಹಣ ಆರಂಭವಾಗಿ ಮುಂಜಾನೆ 3:36ಕ್ಕೆ ಕೊನೆಗೊಳ್ಳುತ್ತದೆ. ಗ್ರಹಣ ಆರಂಭದ ಸಮಯದಿಂದ ಕೊನೆಯಾಗುವವರೆಗೂ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.
ಬರಿಗಣ್ಣಿನಿಂದಲೇ ಚಂದ್ರನನ್ನು ವೀಕ್ಷಣೆ ಮಾಡಬಹುದಾಗಿದ್ದು, ತಾರಾಲಯ ವಿಶೇಷ ಅವಕಾಶ ಮಾಡಿಕೊಟ್ಟಿದೆ. ಬೆಂಗಳೂರಿನಲ್ಲಿ ಶೇ. 6ರಷ್ಟು ಮಾತ್ರ ಗ್ರಹಣ ಗೋಚರವಾಗಲಿದ್ದು, ಬೈನಾಕ್ಯುಲರ್ ಹಾಗೂ ಟೆಲಿಸ್ಕೋಪ್ ವ್ಯವಸ್ಥೆ ಮಾಡಲಾಗಿದೆ.