“ನನ್ನ ಮಣ್ಣು ನನ್ನ ದೇಶ” ಅಭಿಯಾನದ ಅಂಗವಾಗಿ ಪುತ್ತೂರಿನಿಂದ ದೆಹಲಿಗೆ ಪ್ರಯಾಣ

ಹೊಸದಿಗಂತ ವರದಿ ಪುತ್ತೂರು:

ಕೇಂದ್ರ ಸರ್ಕಾರದ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನದಡಿ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಅಭಿಯಾನ ಸಂಚಾಲಕ ಹಾಗೂ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಭಾರತೀಯ ಜನತಾ ಪಾರ್ಟಿಯ ಬಿ ಎಲ್ ಎ 1 ಹರೀಶ್ ಬಿಜತ್ರೆ ಹಾಗೂ ಪುತ್ತೂರು ಗ್ರಾಮಾಂತರ ಮಂಡಲ ಒಬಿಸಿ ಮೋರ್ಚಾ ಅಧ್ಯಕ್ಷ ಸುನೀಲ್ ದಡ್ದು ಅವರು ದೆಹಲಿಗೆ ಪ್ರಯಾಣಿಸಿದ್ದಾರೆ.

ಒಟ್ಟು 45 ಪುಣ್ಯ ಸ್ಥಳ ದೈವಸ್ಥಾನ ಹಾಗೂ ದೇವಸ್ಥಾನದಿಂದ ಮೃತಿಕೆಯನ್ನು ಸಂಗ್ರಹಿಸಿದ ಅಮೃತ ಕಲಶವನ್ನು ದೆಹಲಿಯ ಕರ್ತವ್ಯ ಪಥದಲ್ಲಿ ದೇಶಕ್ಕಾಗಿ ಹುತಾತ್ಮರಾದವರ ಸ್ಮರಣಾರ್ಥ ನಿರ್ಮಾಣವಾಗಲಿರುವ ಅಮೃತವನ ಸಮರ್ಪಿಸಲು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ದೆಹಲಿಗೆ ಪ್ರಯಾಣಿಸಿದ್ದಾರೆ.

ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠ0ದೂರು ಅವರನ್ನು ಬೀಳ್ಕೊಟ್ಟರು. ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!