ಹುಲಿ ಉಗುರು ಧರಿಸಿ ಬಿಗ್ ಬಾಸ್ ಮನೆಗೆ ಹೋಗಲು ಅನುಮತಿ: ಖಾಸಗಿ ಚಾನೆಲ್ ವಿರುದ್ಧ ದೂರು ದಾಖಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಹುಲಿ ಉಗುರು ಪೆಂಡೆಂಟ್ ಧರಿಸಿದ ಪ್ರಕರಣದಲ್ಲಿ ಬಿಗ್ ಬಾಸ್ ಮನೆಯಿಂದಲೇ ವರ್ತೂರು ಸಂತೋಷ್ ಅರೆಸ್ಟ್ ಆಗಿದ್ದು, ಇದೀಗ ಹುಲಿ ಉಗುರು ಧರಿಸಿ ಒಳ ಹೋಗಲು ಅನುಮತಿ ನೀಡಿದ್ದಕ್ಕೆ ಆರ್‌ಟಿಐ ಕಾರ್ಯಕರ್ತ ಖಾಸಗಿ ಚಾನೆಲ್ ವಿರುದ್ಧ ದೂರು ದಾಖಲಿಸಿದ್ದಾರೆ.

ಆರ್‌ಟಿಐ ಕಾರ್ಯಕರ್ತ ದಿಲೀಪ್ ಎಂಬುವವರು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರೂ ಬಿಗ್ ಬಾಸ್ ರಿಯಾಲಿಟಿ ಶೋ ಒಳಗೆ ಹೋಗಲು ಅನುಮತಿ ನೀಡಿರುವ ಚಾನೆಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ , ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ರಾಮನಗರ ಎಸ್ ಪಿ ಗೆ ದೂರು ನೀಡಿದ್ದಾರೆ.

ಸ್ವಂತ ವಸ್ತುಗಳನ್ನ ಬಳಸಬಾರದೆಂದು ನಿಯಮ ಇದೆ. ಖಾಸಗಿ ಸ್ವತ್ತುಗಳನ್ನ ರಿಯಾಲಿಟಿ ಒಳಗೆ ತೆಗೆದುಕೊಂಡು ಹೋಗಲು ಅವಕಾಶ ಮಾಡಿಕೊಡಲಾಗಿದೆ. ಸಂತೋಷ್ ಪರೀಕ್ಷೆಗೊಳಪಡಿಸದೇ ಹುಲಿ ಉಗುರಿನ ಪೆಂಡೆಂಟ್ ಹಾಕಿಕೊಂಡು ಒಳಹೋಗಲು ಬಿಟ್ಟಿದ್ದಾರೆ. ತಮಗೆ ಲಾಭ ಮಾಡಿಕೊಳ್ಳಲು ಸಂತೋಷ್ ನನ್ನ ಹುಲಿ ಉಗುರಿನ ಪೆಂಡೆಂಟ್‌ನೊಂದಿಗೆ ಒಳಗೆ ಹೋಗಲು ಬಿಟ್ಟಿದ್ದಾರೆ. ಖಾಸಗಿ ಚಾನೆಲ್ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನ ಸಂಪೂರ್ಣವಾಗಿ ಉಲ್ಲಂಘಿಸಿದೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕದಡಲು ಹಾಗು ಗಲಾಟೆಯಾಗಲು ಖಾಸಗಿ ಚಾನೆಲ್ ಕಾರಣವಾಗಿದ್ದು, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ ವಾರ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದಾಗಲೇ ಅರಣ್ಯಾಧಿಕಾರಿಗಳು ಬಿಗ್ ಬಾಸ್ ಮನೆಗೆ ನುಗ್ಗಿ ಹುಲಿ ಉಗುರು ಧರಿಸಿದ ಅರೋಪದ ಮೇಲೆ ವರ್ತೂರು ಸಂತೋಷ್‌ರನ್ನು ಬಂಧಿಸಿದ್ದರು. ಈ ಘಟನೆ ನಡೆದ ಬಳಿಕ ರಾಜ್ಯಾದ್ಯಂತ ಹುಲಿ ಉಗುರಿನ ಪ್ರಕರಣ ಸರಣಿಯಂತೆ ಫೋಟೊಗಳು ವೈರಲ್‌ ಆಗತೊಡಗಿದವು. ಸೆಲೆಬ್ರಿಟಿ ರಾಜಕಾರಣಿ ಸ್ವಾಮೀಜಿಗಳು ಸಹ ಪೆಂಡೆಂಟ್ ಧರಿಸಿದ್ದ ಆರೋಪದ ಮೇಲೆ ವಿಚಾರನೆಗೊಳಪಡಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!