ಹೊಸದಿಗಂತ ವರದಿ ವಿಜಯಪುರ:
ನಿಂತ ಲಾರಿಯೊಂದಕ್ಕೆ ಬೆಂಕಿ ಹೊತ್ತಿಕೊಂಡು, ಗ್ಯಾರೇಜ್ ಬೆಂಕಿಗಾಹುತಿ ಆಗಿರುವ ಘಟನೆ ನಗರದ ಶಿಕಾರಖಾನೆ ರಸ್ತೆ ಬಳಿಯ ಇಂದ್ರಾ ಆಟೋ ನಗರದಲ್ಲಿ ಶನಿವಾರ ತಡ ರಾತ್ರಿ ನಡೆದಿದೆ.
ಇಲ್ಲಿನ ನೂರ್‌ಅಹ್ಮದ ಎಂಬುವರ ಗ್ಯಾರೇಜ್ ಸುಟ್ಟು ಭಸ್ಮವಾಗಿದೆ. ಗ್ಯಾರೇಜ್ ಎದುರು ನಿಲ್ಲಿಸಿದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡು ಬೆಂಕಿಯ ಕೆನ್ನಾಲಿಗೆ ಗ್ಯಾರೇಜ್‌ಗೂ ವ್ಯಾಪಿಸಿದೆ. ಇದರಿಂದಾಗಿ ಗ್ಯಾರೇಜ್‌ನಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಸುಬೆಂಕಿಗಾಹಿತಯಾಗಿವೆ.
ಸುದ್ದಿ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನೆ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.