ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್ಗಢ ನಲ್ಲಿ ಮತ್ತೆ ಅಧಿಕಾರಕ್ಕೇರಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದ್ದು, ಇದಕ್ಕಾಗಿ ರಾಹುಲ್ ಗಾಂಧಿ ಅವರು ಜನರೊಂದಿಗೆ ಬೆರೆಯುವುದನ್ನು ಮುಂದುವರಿಸಿದ್ದಾರೆ.
ಛತ್ತೀಸ್ಗಢದಲ್ಲಿ ಪ್ರಚಾರ ನಡೆಸುತ್ತಿರುವ ರಾಹುಲ್, ಅಲ್ಲಿನ ರೈತರೊಂದಿಗೆ ಬೆಳೆ ಕಟಾವು ಮಾಡುವ ಮೂಲಕ ಗಮನ ಸೆಳೆದರು.
ರಾಜಧಾನಿ ರಾಯ್ಪುರದ ಸಮೀಪದಲ್ಲಿರುವ ಕಥಿಯಾ ಗ್ರಾಮಕ್ಕೆ ಭೇಟಿ ನೀಡಿದ ಅವರು, ಭತ್ತದ ಗದ್ದೆಗಳಲ್ಲಿ ಬೆಳೆ ಕೊಯ್ಲು ಮಾಡುತ್ತಿದ್ದ ರೈತರ ಜೊತೆ ಸೇರಿಕೊಂಡ ಬೆಳೆ ಕಟಾವು ಮಾಡಿದರು. ಬಳಿಕ ಅವರ ಜೊತೆ ಸಂವಾದ ನಡೆಸಿದರು.
ರೈತರೊಂದಿಗೆ ರಾಹುಲ್ ಗಾಂಧಿ ಗದ್ದೆಯಲ್ಲಿ ಕೆಲಸ ಮಾಡುತ್ತಿರುವ ಚಿತ್ರಗಳನ್ನು ಕಾಂಗ್ರೆಸ್ ತನ್ನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದೆ. ರಾಹುಲ್ ಭತ್ತವನ್ನು ಕೊಯ್ಲು ಮಾಡುತ್ತಿರುವುದು ಮತ್ತು ರೈತರೊಂದಿಗೆ ಮಾತುಕತೆ ನಡೆಸಿದ್ದು, ಕಾಂಗ್ರೆಸ್ ನಾಯಕನ ಜೊತೆಗೆ, ಮುಖ್ಯಮಂತ್ರಿ ಭೂಪೇಶ್ ಬಘೇಲ್, ಉಪಮುಖ್ಯಮಂತ್ರಿ ಟಿಎಸ್ ಸಿಂಗ್ ದೇವು ಗಾಂಧಿ ಸೇರಿದಂತೆ ಇತರರು ಜೊತೆಗಿದ್ದರು.
ರಾಹುಲ್ ಗಾಂಧಿ ಅದರ ಚಿತ್ರಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿಯೂ ಹಂಚಿಕೊಂಡಿದ್ದಾರೆ. ರೈತರು ಸಂತೋಷವಾಗಿದ್ದರೆ ದೇಶ ಖುಷಿಯಾಗಿರುತ್ತದೆ. ಛತ್ತೀಸ್ಗಢದ ರೈತರಿಗೆ ಕಾಂಗ್ರೆಸ್ ಸರ್ಕಾರ 5 ಉತ್ತಮ ಯೋಜನೆಗಳನ್ನು ನೀಡಿದೆ. ಇದರಿಂದ ಅವರು ದೇಶದಲ್ಲಿಯೇ ಉತ್ತಮ ಸ್ಥಿತಿಯಲ್ಲಿದ್ದಾರೆ. ಪ್ರತಿ ಕ್ವಿಂಟಾಲ್ ಭತ್ತಕ್ಕೆ 2,640 ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಯನ್ನು 26 ಲಕ್ಷ ರೈತರಿಗೆ 23 ಸಾವಿರ ಕೋಟಿ ರೂಪಾಯಿ ಸಬ್ಸಿಡಿ, 19 ಲಕ್ಷ ರೈತರ 10 ಸಾವಿರ ಕೋಟಿ ರೂ.ಗಳ ಸಾಲ ಮನ್ನಾ, ವಿದ್ಯುತ್ ಬಿಲ್ ದರ ಅರ್ಧದಷ್ಟು ಕಡಿತ, 5 ಲಕ್ಷ ಕೃಷಿ ಕಾರ್ಮಿಕರಿಗೆ ವರ್ಷಕ್ಕೆ 7 ಸಾವಿರ ರೂಪಾಯಿ ನೀಡಿರುವುದು ಉತ್ತಮ ಯೋಜನೆಗಳಾಗಿವೆ ಎಂದು ಬರೆದುಕೊಂಡಿದ್ದಾರೆ.
आज छत्तीसगढ़ में किसानों के बीच पहुंचे जननायक @RahulGandhi जी।
किसानों संग कांग्रेस का रिश्ता बेहद पुराना और मजबूत रहा है, जो समय के साथ और गहरा होता जा रहा है।
इसी परंपरा के साथ छत्तीसगढ़ में कांग्रेस सरकार हर मोड़ पर किसानों का साथ निभा रही है, उन्हें आर्थिक और सामाजिक रूप… pic.twitter.com/iGXa6JRQCA
— Congress (@INCIndia) October 29, 2023