ಹೊಸದಿಗಂತ ವರದಿ,ಹಾಸನ:
ದೌರ್ಬಲ್ಯವೇ ಮರಣ, ಶಕ್ತಿಯೇ ಜೀವನ. ಈ ಭೂಮಿಯಲ್ಲಿ ಬದುಕಬೇಕೆಂದರೇ ಶಕ್ತಿ ಇರಲೇಬೇಕು. ಅಂತಹ ಶಕ್ತಿ ತುಂಬುವ ಕೆಲಸ ಮಾಡಬೇಕಾಗಿದ್ದು, ವ್ಯಕ್ತಿ ನಿರ್ಮಾಣದಿಂದ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಕರ್ನಾಟಕ ದಕ್ಷಿಣ ಪ್ರಾಂತ್ಯದ ಸಹ ಸೇವಾ ಪ್ರಮುಖ್ ಸೀತಾರಾಮ್ ತಿಳಿಸಿದರು.
ನಗರದ ತಣ್ಣೀರುಹಳ್ಳದ ಬಳಿ ಇರುವ ಶ್ರೀ ಶಿವಲಿಂಗೇಶ್ವರ ಮಠದ ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘ (ಆರ್.ಎಸ್.ಎಸ್.) ನಗರ ಘಟಕವತಿಯಿಂದ ವಿಜಯದಶಮಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪಥ ಸಂಚಲನ ನಡೆಸಿ ನಂತರ ಸಭಾ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಜಗತ್ತಿನ ಅನೇಕ ನಾಗರೀಕವನ್ನು ನೋಡಿದರೇ ಹಿಂದೂಸ್ತಾನ, ಹಿಂದೂ ಧರ್ಮ, ಸಂಸ್ಕೃತಿ, ಸಮಾಜಕ್ಕೆ ಪುಟ್ಟ ಸ್ಥಾನವಿದೆ. ಸಾವಿರಾರು ವರ್ಷಗಳಿಂದ ಎಲ್ಲಾ ಹಂತದಲ್ಲೂ ಇದರ ಮೇಲೆ ಅಪಮಾನ ಮಾಡುವ ಪ್ರಯತ್ನಗಳು ನಡೆಯುತ್ತಲೆ ಇದೆ. ಸ್ವಾಮಿ ವಿವೇಕಾನಂದರು ಈ ಧರ್ಮವನ್ನು ಉಲ್ಲೇಕ ಮಾಡಿದ್ದು. ಭಾರತ ಹಿಂದೂ ಸ್ಥಾನ ಎಂದರೆ ಜಗತ್ತಿನ ಮುಂದೆ ಒಂದು ಧರ್ಮ ಪ್ರಧಾನವಾಗಿರುವ ಸಮಾಜ. ಈ ರಾಷ್ಟ್ರದ ಆತ್ಮ ಧರ್ಮ. ಆದರೇ ಧರ್ಮದ ಬಗ್ಗೆ ವ್ಯಾಖ್ಯಾನ ಮಾಡಬೇಕಾದರೇ ತಮ್ಮದೆಯಾದ ರೀತಿ ಅನೇಕರು ಕಿರುಚಾಡಿ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಹಿಂದೂ ಸಮಾಜ ಒಂದಷ್ಟು ಆತ್ಮವಿಸ್ಮೃತಿಗೆ ಒಳಗಾಗಿರುವುದು ಸತ್ಯ. ಜಗತ್ತಿನ ಮೂಲೆ ಮೂಲೆಗಳಿಂದ ಭಾರತದ ಮೇಲೆ ಆಕ್ರಮಣಗಳು ಆದಾಗ ಈ ಸಮಾಜ ಅಸ್ವಸ್ಥಗೊಂಡು ಅದನ್ನು ಸಂಘಟಿತವಾಗಿ ಎದುರಿಸಬೇಕು ಮತ್ತು ಅದಕ್ಕೆ ಸೂಕ್ತವಾದ ಉತ್ತರ ಕೊಡಬೇಕು ಎನ್ನುವ ಬಗ್ಗೆ ಮರೆತು ಹೋಗಿತ್ತು. ಭಾರತವು ಜಗತ್ತಿನ ಮುಂದೆ ಗುರು ಎಂದು ಕರೆಯಿಸಿಕೊಂಡು ಈಗ ನಾವು ಅವರ ಶಿಷ್ಯರಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಾಸ್ತವ ನೋಡಿದರೇ ಭಾರತದ ಹಿಂದೂ ಸಂಸ್ಕೃತಿ ಜಗತ್ತಿನ ಜಗದ್ಗುರು ಆಗಿತ್ತು. ಇಂತಹ ವೈಫರಿತ್ಯಕ್ಕೆ ಸಮಾಜ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದೂ ಸಮಾಜವನ್ನು ಶಕ್ತಿಶಾಲಿಯಾಗಿ ಕಟ್ಟಿ ಜಗತ್ತಿನ ಮುಂದೆ ರಾಷ್ಟçವನ್ನು ಅತ್ಯಂತ ಗೌರವಶಾಲಿ ಸಮಾಜವನ್ನಾಗಿ ನಿರ್ಮಾಣ ಮಾಡಬೇಕೆಂದು ಅನೇಕ ರೀತಿಯಲ್ಲಿ ಪ್ರಯತ್ನ ಮಾಡಲಾಗಿದೆ. ಇದನ್ನು ಆರ್.ಎಸ್.ಎಸ್. ಮಾಡಿದೆ ಎಂದು ಎಲ್ಲಿಯೂ ಹೇಳಿಕೊಳ್ಳಲಿಲ್ಲ. ಶಂಕರಚಾರ್ಯರಿಂದ ಹಿಡಿದು ಸ್ವಾಮಿ ವಿವೇಕಾನಂದವರೆಗೂ ಶಿವಾಜಿ ಹಾದಿಯಾಗಿ ಅನೇಕ ಜನ ಮಹತ್ಮರು, ಮಹಾಪುರುಷರು ಈ ಸಮಾಜವನ್ನು, ಧರ್ಮದ ಪುನರ್ ಸ್ಥಾಪನೆ ಕಾರ್ಯವನ್ನು ತಮ್ಮದೆಯಾದಂತಹ ರೀತಿಯಲ್ಲಿ ತಮ್ಮ ಕಾಲಗಟ್ಟದಲ್ಲಿ ಶಥಪ್ರಯತ್ನ ಮಾಡಿ ಕಟ್ಟುವ ಪ್ರಯತ್ನ ಮಾಡಿದ್ದಾರೆ ಎಂದರು.
ಸಮಾಜ ಕಟ್ಟಕಡೆಯ ವ್ಯಕ್ತಿಯು ಇದರಲ್ಲಿ ಕೈಜೋಡಿಸಬೇಕಾಗಿತ್ತು. ಆ ಕೊರತೆ ಇರುವುದನ್ನು ಇತಿಹಾಸದಲ್ಲಿ ಕಾಣಬಹುದಾಗಿದೆ. ಒಬ್ಬ ವ್ಯಕ್ತಿಗೆ ಬಂದಿರುವ ಖಾಯಿಲೆಯನ್ನು ಯಾರು ಬೇಕಾದರೂ ಸರಿಮಾಡಬಹುದು ಆದರೇ ಇಡೀ ಸಮಾಜ, ರಾಷ್ಟçವನ್ನು ಈ ಸಂಸ್ಕೃತಿಗೆ ಆಗಿರುವ ಖಾಯಿಲೆಯನ್ನು ಇದನ್ನು ಸರಿಪಡಿಸುವ ಕೆಲಸ ಆಗಬೇಕಾಗಿದೆ ಎಂದು ಕಿವಿಮಾತು ಹೇಳಿದರು. ಆರ್.ಎಸ್.ಎಸ್. ಸ್ವಾತಂತ್ರ ಹೋರಾಟದಲ್ಲಿ ಎಲ್ಲಿ ಇತ್ತು ಎಂದು ಪ್ರಸ್ತುತದಲ್ಲಿ ಕೇಳುತ್ತಿದ್ದು, ಸ್ವಾತಂತ್ರ ಹೋರಾಟದ ಹಿಂದೆ ಅನೇಕ ಬಾರಿ ದೇಶ ಮೇಲೆದ್ದು ಬಂದು, ಅನೇಕರು ವಿಜಯಿ ಆಗಿದ್ದಾರೆ. ಆದ್ರೆ ಮತ್ತೆ ಮತ್ತೆ ಈ ದೇಶ, ಸಂಸ್ಕೃತಿಯು ಪಥನದ ಹಾದಿ ಹಿಡಿಯುತ್ತಿರುವುದು ಏಕೆ ಎನ್ನುವ ಪ್ರಶ್ನೆ ನಮ್ಮ ಮುಂದೆ ಇದೆ ಎಂದು ಬೇಸರವ್ಯಕ್ತಪಡಿಸಿದರು.
ಅಂದಿನ ಹೋರಾಟದ ಗಾಂಧೀಜಿಯ ಹಾದಿಯಾಗೆ ಎಲ್ಲಾ ಪ್ರಮುಖರು ಧಣಿದಿದ್ದರು. ಒಂದು ಬಾರಿ ಸ್ವಾತಂತ್ರ ಸಿಕ್ಕಿ ಅಧಿಕಾರ ಬರಲಿ ಆಮೇಲೆ ಸರಿಪಡಿಸುವ ಬಗ್ಗೆ ಹೇಳಿದ್ದರು. ಇಲ್ಲಿ ಅಧಿಕಾರದ ದೃಷ್ಠಿಕೋನ ಮಾತ್ರ ಇಟ್ಟುಕೊಂಡಿದ್ದರು. ಅಧಿಕಾರ ಎಂಬುದು ಶಾಶ್ವತವಲ್ಲ. ಮತ್ತೆ ಪತನವಾಗಬಹುದು. ಶಾಶ್ವತವಾದ ಪರಿಹಾರ ಬೇಕಾಗಿದೆ ಎಂದು ಯೋಚನೆ ಮಾಡಲಾಯಿತು. ಮೊದಲು ವ್ಯಕ್ತಿಯನ್ನು ಸರಿ ಮಾಡಬೇಕು. ವ್ಯಕ್ತಿ ನಿರ್ಮಾಣದಿಂದ ರಾಷ್ಟç ನಿರ್ಮಾಣ ಎನ್ನುವ ಪರಿಕಲ್ಪನೆ ಇಟ್ಟುಕೊಂಡು ಕೈಹಾಕಲಾಗಿ ಸಂಘಟನೆ ಮಾಡಲಾಯಿತು.
ಪ್ರತಿ ಜೀವಿಯು ಕೂಡ ಶಕ್ತಿಗೊಸ್ಕರ ಬದುಕುತ್ತದೆ. ಈ ಭೂಮಿಯಲ್ಲಿ ಬದುಕಬೇಕೆಂದರೇ ಶಕ್ತಿ ಇರಲೇಬೇಕು. ದೌರ್ಬಲ್ಯವೇ ಮರಣ, ಶಕ್ತಿಯೇ ಜೀವನ. ಈ ಸಮಾಜ, ದೇಶ ಜನರು ಶಕ್ತಿಯ ಸಂಪಾದನೆ ಮಾಡಿಕೊಳ್ಳಬೇಕು. ಅದು ಸಂಘಟಿತ ಶಕ್ತಿ ಆಗಿರಬೇಕು. ಅದಕ್ಕಾಗಿ ಒಬ್ಬಬ್ಬರಲ್ಲೂ ಅಂತ ಸಾಮಾರ್ಥ್ಯವನ್ನು ತುಂಬಬೇಕಾಗಿದೆ ಎಂದು ಸಲಹೆ ನೀಡಿದರು. ವ್ಯಕ್ತಿಗಳಲ್ಲಿ ಶಕ್ತಿಯನ್ನು ತುಂಬುವAತಹ, ಸಮಾಜದಲ್ಲಿ ಶಕ್ತಿ ತರಲು ಪ್ರಾರಂಭಿಸಿದರು. ಅದೆ ರಾಷ್ಟ್ರೀಯ ಸ್ವಯಂ ಸೇವಾ ಸಂಘ. ಅದರ ಮೂಲಕ ಮುಂದಿನ ರಾಷ್ಟ್ರನಿರ್ಮಾಣ ಕಾರ್ಯಕ್ಕೊಸ್ಕರ ವ್ಯಕ್ತಿಗಳನ್ನು ಜೋಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಈ ವಿಜಯದಶಮಿಯಲ್ಲಿ ಸಂಕಲ್ಪ ಮಾಡಬೇಕಾಗಿರುವು ಇಡೀ ಸಮಾಜವನ್ನೆ ಆಹ್ವಾನಿಸಬೇಕಾಗುತ್ತದೆ. ಸ್ವಯಂ ಸೇವಕರಿಗೆ ಮಹತ್ತರವಾದ ಜವಬ್ಧಾರಿಯಿದೆ ಎಂದು ಹೇಳಿದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ನಗರದ ಸಮೀಪ ದೊಡ್ಡಮಂಡಿಗನಹಳ್ಳಿ ಬಳಿ ಇರುವ ಮೈದಾನದಲ್ಲಿ ಆರ್.ಎಸ್.ಎಸ್. ಪಥ ಸಂಚಲನ ಆರಂಭವಾಗಿ ಬೇಲೂರು ರಸ್ತೆ, ವಿಜಯನಗರ ಬಡಾವಣೆ ಸುತ್ತ ಮುತ್ತ ಸಂಚರಿಸಿತು. ಪಥ ಸಂಚಲನದ ವೇಳೆ ಮನೆ ಮುಂದೆ ನಿವಾಸಿಗಳು ರಂಗೋಲಿ ಬಿಟ್ಟಿ ಸ್ವಾಗತ ಮಾಡಿದಲ್ಲದೇ ಹೂವಿನ ಮಳೆ ಕರೆದರು.
ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್. ಮುಖಂಡ ಹಾಗೂ ಉದ್ಯಮಿ ಶ್ರೀಧರ್, ತಣ್ಣೀರುಹಳ್ಳದ ಆರ್.ಎಸ್.ಎಸ್. ಮುಖಂಡ ಮೋಹನ್ ಕುಮಾರ್ ಇತರರು ಉಪಸ್ಥಿತರಿದ್ದರು