ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಮಾಸ್ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಶಾನಿ ಲುಕ್ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಇಸ್ರೇಲ್ ಸರ್ಕಾರ ಅಧಿಕೃತ ಹೇಳಿಕೆ ನೀಡಿದ್ದು, ಇಸ್ರೇಲ್ ಭದ್ರತಾ ಸಿಬ್ಬಂದಿಗಳು ಮೃತದೇಹ ಪತ್ತೆಹಚ್ಚಿದ್ದಾರೆ ಹಾಗೂ ಇದು ಅಪಹರಣಕ್ಕೊಳಗಾದ 23 ವರ್ಷದ ಶಾನಿ ಮೃತದೇಹ ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಲ್ಲಿ ಸಂಗೀತ ಕಾರ್ಯಕ್ರಮಕ್ಕೆಂದು ಬಂದಿದ್ದ ಶಾನಿ ಲುಕ್ಳನ್ನು ಉಗ್ರರು ಅಪಹರಿಸಿದ್ದರು. ಈಕೆಯನ್ನು ಅಪಹರಿಸಿ ಅರೆನಗ್ನಗೊಳಿಸಿ ಜೀಪ್ನಲ್ಲಿ ಮೆರವಣಿಗೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ಈಗ ಆಕೆಯ ಮೃತದೇಹ ಪತ್ತಾಯಗಿದ್ದು, ಆಕೆಯ ಜೊತೆಗೆ ತೀವ್ರವಾದ ಹಿಂಸಾಚಾರ ನಡೆಸಲಾಗಿದೆ ಎಂದು ಇಸ್ರೇಲ್ ಹೇಳಿದೆ.