ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶವನ್ನೇ ಬೆಚ್ಚಿಬೀಳಿಸಿದ್ದ ಕೇರಳದ ಕಲಮಸ್ಸೇರಿ ಬಾಂಬ್ ಸ್ಪೋಟಕ್ಕೆ ಆರೋಪಿ ಖುರ್ಚು ಮಾಡಿದ್ದು ಕೇವಲ ಮೂರು ಸಾವಿರ ರೂ.!
ಹೌದು, ಈ ಅಂಶವನ್ನು ಖುದ್ದು ಆರೋಪಿ ಡೊಮಿನಿಕ್ ಮಾರ್ಟಿನ್ ಪೊಲೀಸರ ಮುಂದೆ ಬಹಿರಂಗಪಡಿಸಿದ್ದಾನೆ.ಸ್ಫೋಟಕ್ಕೆ ಐಇಡಿ, ಗನ್ ಪೌಡರ್ ಮತ್ತು ಪೆಟ್ರೋಲ್ ಖರೀದಿಸಲಾಗಿತ್ತು. ಆರೋಪಿ ಡೊಮಿನಿಕ್ ತಾನು ಕೆಲವು ವಾರಗಳ ಹಿಂದೆ ಪೆಟ್ರೋಲ್ ಮತ್ತು ಐಇಡಿಗಾಗಿ ವಸ್ತುಗಳನ್ನು ಖರೀದಿಸಿದ್ದಾಗಿಯೂ ಇವುಗಳ ವೆಚ್ಚ ಮೂರು ಸಾವಿರ ರೂ.ಗಳೆಂದು ಪೋಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.