ಹೊಸದಿಗಂತ ಡಿಜಿಟಲ್ ಡೆಸ್ಕ್:
2023ನೇ ಸಾಲಿನ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕೊಡಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು 68 ಜನರಿಗೆ ವಿತರಣೆ ಮಾಡಲಾಗುವುದು. ಇದರಲ್ಲಿ 10 ಸಂಸ್ಥೆಗಳು ಹಾಗೂ ಕೊಪ್ಪಳದಲ್ಲಿ ಸರ್ಕಾರಿ ಶಾಲೆ ನಿರ್ಮಾಣಕ್ಕೆ ಭೂಮಿ ಕೊಟ್ಟ ಹುಚ್ಚಮ್ಮ, ಬೀದರ್ನ ಮಂಗಳಮುಖಿ ಸೇರಿದಂತೆ ಒಟ್ಟು 68 ಜನರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮಾಹಿತಿ ನೀಡಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 1,157 ನನ್ನ ಬಳಿ ಬಂದು ರಾಜ್ಯೋತ್ಸವ ಅರ್ಜಿ ತಂದುಕೊಟ್ಟಿದ್ದರು. 2,166 ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿ ಎಂದು 26,555 ಜನರು ಶಿಫಾರಸು ಮಾಡಿದ್ದರು. ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಜೊತೆ ಚರ್ಚೆ ಮಾಡಿದ ಬಳಿಕ 68 ಪ್ರಶಸ್ತಿ ಆಯ್ಕೆ ಮಾಡಿದ್ದೇವೆ. ಸುವರ್ಣ ಮಹೋತ್ಸವ ಪ್ರಯುಕ್ತ 10 ಸಂಘ ಸಂಸ್ಥೆಗಳಿಗೆ ನೀಡಿದ್ದೇವೆ. ಈ ಬಾರಿ 100 ವರ್ಷ ದಾಟಿದ ಇಬ್ಬರಿಗೆ ಪ್ರಶಸ್ತಿ ನೀಡಲಾಗಿದೆ.
ಸರ್ಕಾರಿ ಶಾಲೆಗೆ ಭೂಮಿ ಕೊಟ್ಟ ಹುಚ್ಚಮ್ಮ ಆಯ್ಕೆ:
ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರಿ ಶಾಲೆ ನಿರ್ಮಾಣ ಮಾಡಲಿಕ್ಕೆ ಭೂಮಿ ದಾನ ಮಾಡಿದ ಹುಚ್ಚಮ್ಮ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಇನ್ನು ಚಂದ್ರನ ಅಂಗಳಕ್ಕೆ ಉಪಗ್ರಹವನ್ನು ಕಳುಹಿಸಿದ ಇಸ್ರೋ ಸಂಸ್ಥೆಯ ಮುಖ್ಯಸ್ಥ ಎಸ್. ಸೋಮನಾಥ್ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಸಾಧಕರನ್ನು ಆಯ್ಕೆ ಮಾಡಲಾಗಿದೆ.
25 ಗ್ರಾಂ ಚಿನ್ನ, 5 ಲಕ್ಷ ರೂ. ನಗದು:
ರಾಜ್ಯೋತ್ಸವ ಪ್ರಶಸ್ತಿಯು 25 ಗ್ರಾಂ ಚಿನ್ನದ ಪದಕ ಹಾಗೂ 5 ಲಕ್ಷ ನಗದು ಒಳಗಡಿರುತ್ತದೆ. ನಾಳೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.
ಹೀಗಿದೆ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ
ಸಂಗೀತ/ ನೃತ್ಯ ಕ್ಷೇತ್ರ
ಡಾ.ನಯನ ಎಸ್ ಮೋರೆ – ಬೆಂಗಳೂರು
ನೀಲಾ ಎಂ ಕೊಡ್ಲಿ – ಧಾರವಾಡ
ಶಬ್ಬೀರ್ ಅಹಮದ್ – ಬೆಂಗಳೂರು
ಡಾ.ಎಸ್ ಬಾಳೇಶ ಭಜಂತ್ರಿ – ಬೆಳಗಾವಿ
ಚಲನಚಿತ್ರ
1.ಡಿಂಗ್ರಿ ನಾಗರಾಜು – ಬೆಂಗಳೂರು
2.ಬ್ಯಾಂಕ್ ಜನಾರ್ಧನ್ -ಬೆಂಗಳೂರು
ರಂಗಭೂಮಿ
1.ಎಜಿ ಚಿದಂಬರ ರಾವ್ ಜಂಬೆ-ಶಿವಮೊಗ್ಗ
2.ಪಿ ಗಂಗಾಧರ ಸ್ವಾಮಿ- ಮೈಸೂರು
3.ಹೆಚ್ ಬಿ ಸರೋಜಮ್ಮ- ಧಾರವಾಡ
4.ಡಾ.ವಿಶ್ವನಾಥ ವಂಶಾಕೃತ ಮಠ-ಬಾಗಲಕೋಟೆ
5.ಪಿ.ತಿಪ್ಪೇಸ್ವಾಮಿ-ಚಿತ್ರದುರ್ಗ.
ಶಿಲ್ಪಕಲೆ, ಚಿತ್ರಕಲೆ, ಕರಕುಶಲ
1.ಟಿ.ಶಿವಶಂಕರ್-ದಾವಣಗೆರೆ
2.ಕಾಳಪ್ಪ ವಿಶ್ವಕರ್ಮ-ರಾಯಚೂರು
3.ಮಾರ್ಥಾ ಜಾಕಿಮೋವಿಚ್-ಬೆಂಗಳೂರು
4.ಪಿ.ಗೌರಯ್ಯ-ಮೈಸೂರು
ಯಕ್ಷಗಾನ, ಬಯಲಾಟ
1.ಅರ್ಗೋಡು ಮೋಹನದಾಸ್ ಶೆಣ್ಯೆ-ಉಡುಪಿ
2.ಕೆ.ಲೀಲಾವತಿ ಬೈಪಾಡಿತ್ತಾಯ-ದಕ್ಷಿಣ ಕನ್ನಡ
3.ಕೇಶಪ್ಪ ಶಿಳ್ಳಿಕ್ಯಾತರ-ಕೊಪ್ಪಳ
4.ದಳವಾಯಿ ಸಿದ್ದಪ್ಪ(ಹಂದಿಜೋಗಿ)-ವಿಜಯನಗರ
ಜಾನಪದ ಕ್ಷೇತ್ರ
1.ಹುಸೇನಾಬಿ ಬುಡೇನ್ ಸಾಬ್ ಸಿದ್ಧಿ-ಉತ್ತರಕನ್ನಡ
2.ಶಿವಂಗಿ ಶಣ್ಮರಿ-ದಾವಣಗೆರೆ
3.ಮಹದೇವು-ಮೈಸೂರು
4.ನರಸಪ್ಪಾ-ಬೀದರ್
5.ಶಕುಂತಲಾ ದೇವಲಾನಾಯಕ-ಕಲಬುರ್ಗಿ
6.ಹೆಚ್ ಕೆ ಕಾರಮಂಚಪ್ಪ-ಬಳ್ಳಾರಿ
7.ಡಾ.ಶಂಬು ಬಳಿಗಾರ-ಗದಗ
8.ವಿಭೂತಿ ಗುಂಡಪ್ಪ-ಕೊಪ್ಪಳ
9.ಚೌಡಮ್ಮ-ಚಿಕ್ಕಮಗಳೂರು
ಸಮಾಜಸೇವೆ
1.ಹುಚ್ಚಮ್ಮಬಸಪ್ಪ ಚೌದ್ರಿ – ಕೊಪ್ಪಳ
2.ಚಾರ್ಮಾಡಿ ಹಸನಬ್ಬ-ದಕ್ಷಿಣ ಕನ್ನಡ
3.ಕೆ.ರೂಪ್ಲಾ ನಾಯಕ್-ದಾವಣಗೆರೆ
4.ಪೂಜ್ಯ ನಿಜಗುಣಾನಂದ ಮಹಾಸ್ವಾಮಿಗಳು, ನಿಷ್ಕಲ ಮಂಟಪ-ಬೆಳಗಾವಿ
5.ನಾಗರಾಜು.ಜಿ-ಬೆಂಗಳೂರು.
ಆಡಳಿತ
1.ಜಿ.ವಿ ಬಲರಾಮ್-ತುಮಕೂರು
ವೈದ್ಯಕೀಯ
1.ಡಾ.ಸಿ.ರಾಮಚಂದ್ರ-ಬೆಂಗಳೂರು
2.ಡಾ.ಪ್ರಶಾಂತ್ ಶೆಟ್ಟಿ-ದಕ್ಷಿಣ ಕನ್ನಡ
ಸಾಹಿತ್ಯ
1.ಪ್ರೊ.ಸಿ.ನಾಗಣ್ಣ-ಚಾಮರಾಜನಗರ
2.ಸುಬ್ಬು ಹೊಲೆಯಾರ್-ಹಾಸನ
3.ಸತೀಶ್ ಕುಲಕರ್ಣಿ-ಹಾವೇರಿ
4.ಲಕ್ಷ್ಮೀಪತಿ ಕೋಲಾರ-ಕೋಲಾರ
5.ಪರಪ್ಪ ಗುರುಪಾದಪ್ಪ ಸಿದ್ದಾಪುರ-ವಿಜಯಪುರ
6.ಡಾ.ಕೆ ಷರೀಫಾ-ಬೆಂಗಳೂರು
ಶಿಕ್ಷಣ
1.ರಾಮಪ್ಪ (ರಾಮಣ್ಣ) ಹವಳೆ- ರಾಯಚೂರು
2.ಕೆ.ಚಂದ್ರಶೇಖರ್-ಕೋಲಾರ
3.ಕೆ.ಟಿ ಚಂದು-ಮಂಡ್ಯ.
ಕ್ರೀಡೆ
1.ಕು.ದಿವ್ಯ ಟಿಎಸ್ -ಕೋಲಾರ
2.ಅದಿತಿ ಅಶೋಕ್-ಬೆಂಗಳೂರು
3.ಅಶೋಕ್ ಗದಿಗೆಪ್ಪ ಏಣಗಿ-ಧಾರವಾಡ
ನ್ಯಾಯಾಂಗ
1.ಜಸ್ಟೀಸ್ ವಿ ಗೋಪಾಲಗೌಡ- ಚಿಕ್ಕಬಳ್ಳಾಪುರ
ಪರಿಸರ
ಸೋಮನಾಥರೆಡ್ಡಿ ಪೂರ್ಮಾ-ಕಲಬುರ್ಗಿ
ದ್ಯಾವನಗೌಡ ಟಿ ಪಾಟೀಲ್-ಧಾರವಾಡ
ಶಿವರೆಡ್ಡಿ ಹನುಮರೆಡ್ಡಿ ವಾಸನ-ಬಾಗಲಕೋಟೆ
ಸಂಕೀರ್ಣ
ಎ ಎಂ ಮದರಿ-ವಿಜಯಪುರ
ಹಾಜಿ ಅಬ್ದುಲ್ಲಾ ಪರ್ಕಳ-ಉಡುಪಿ
ಮಿಮಿಕ್ರಿ ದಯಾನಂದ್- ಮೈಸೂರು
ಡಾ.ಕಬ್ಬಿನಾಳೆ ವಸಂತ ಭಾರದ್ವಜ್-ಮೈಸೂರು
ಲೆ.ಜ.ಕೊಡನ ಪೂವಯ್ಯ ಕಾರ್ಯಪ್ಪ-ಕೊಡಗು
ಮಾದ್ಯಮ
ದಿನೇಶ್ ಅಮೀನ್ ಮಟ್ಟು-ದಕ್ಷಿಣ ಕನ್ನಡ
ಜವರಪ್ಪ-ಮೈಸೂರು
ಮಾಯಾ ಶರ್ಮಾ-ಬೆಂಗಳೂರು
ರಫೀ ಭಂಡಾರಿ-ವಿಜಯಪುರ
ವಿಜ್ಞಾನ, ತಂತ್ರಜ್ಞಾನ ಕ್ಷೇತ್ರ
ಎಸ್ ಸೋಮನಾಥನ್ ಶ್ರೀಧರ್ ಪನಿಕರ್-ಬೆಂಗಳೂರು
ಪ್ರೊ.ಗೋಪಾಲನ್ ಜಗದೀಶ್-ಚಾಮರಾಜನಗರ
ಹೊರನಾಡು, ಹೊರದೇಶ ಕ್ಷೇತ್ರ
ಸೀತಾರಾಮ ಅಯ್ಯಂಗಾರ್
ದೀಪಕ್ ಶೆಟ್ಟಿ
ಶಶಿಕಿರಣ್ ಶೆಟ್ಟಿ
ಸ್ವಾತಂತ್ರ್ಯ ಹೋರಾಟಗಾರ
ಪುಟ್ಟಸ್ವಾಮಿಗೌಡ-ರಾಮನಗರ