ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಅಭಿವೃದ್ಧಿಗೆ ೧೦ ರೂ. ನೀಡಿಲ್ಲ. ಅಭಿವೃದ್ಧಿ ಮಾಡದಿದ್ದರೆ ಸರ್ಕಾರ ಏಕೆ ಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಪ್ರಶ್ನಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯ ಕತ್ತಲಲ್ಲಿ ಮುಳುಗಿದೆ. ಸಮರ್ಪಕವಾಗಿ ವಿದ್ಯುತ್ ಉತ್ಪಾದನೆ ಮಾಡುತ್ತಿಲ್ಲ. ರೈತರಿಗೆ ವಿದ್ಯುತ್ ಸಹ ಸರಿಯಾಗಿ ನೀಡುತ್ತಿಲ್ಲ. ರೈತರು ಬೆಳೆದ ಅಲ್ಪಸ್ವಲ್ಪ ಬೆಳೆಗಳು ವಿದ್ಯುತ್ ಸರಬರಾಜು ಮಾಡದ ಕಾರಣ ಹಾಳಾಗುತ್ತಿವೆ. ವಿದ್ಯುತ್ ಬಿಡುವ ವಿಚಾರ ಕೇಲವ ಮಾಧ್ಯಮ ಹಾಗೂ ಅಧಿಕಾರಿಗಳ ಸಭೆ ಸೀಮಿತವಾಗಿವೆ ಎಂದು ಆರೋಪಿಸಿದರು.
ಕಳೆದ ೫೦ ವರ್ಷದಿಂದ ಹುಲಿ ಉಗುರಿನ ಪೆಂಡೆಂಟ್ ಬಳಸಲಾಗುತ್ತಿದೆ. ಈಗ ಪೆಂಡೆಂಟ್ ಇದ್ದವರ ಬಂಧನ ಮಾಡಿಸಿ ಜನ ಸಾಮಾನ್ಯರ ಯಾಮಾರಿಸುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ. ಕಾಂಗ್ರೆಸ್‌ನಲ್ಲಿ ಮನೆಯೊಂದು ಮೂರು ಬಾಗಿಲು ಅಲ್ಲ ನೂರು ಬಾಗಿಲು. ಬಿಜೆಪಿ ಆಪರೇಶನ್ ಕಮಲ ಮಾಡುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ನವರೇ ಸರ್ಕಾರ ಕಿತ್ತು ಹಾಕಲಿದ್ದಾರೆ. ಹುಲಿ ಉಗುರು ಹಾಗೂ ಅಪರೇಶನ್ ಕಮಲ ಜನರ ಮೈಂಡ್ ಡೈವರ್ಟ್ ಮಾಡಲು ಎಂದರು.