ಹೊಸದಿಗಂತ ವರದಿ, ಮೈಸೂರು:
ಪ್ಯಾಲೆಸ್ಟೈನ್ ಪರವಾಗಿ ಎಸ್‌ಡಿಪಿಐ ಮೈಸೂರಿನಲ್ಲಿ ಮಂಗಳವಾರ ರ‍್ಯಾಲಿ ನಡೆಸುವುದಕ್ಕೆ ಅನುಮತಿ ನೀಡಲು ನಿರಾಕರಿಸಿದ ಪೊಲೀಸರು, ಮುನ್ನೇಚ್ಚರಿಕೆ ಕ್ರಮವಾಗಿ ಹಲವು ಮುಖಂಡರನ್ನು ತಮ್ಮ ವಶಕ್ಕೆ ತೆಗೆದುಕೊಂಡರು.
ಇಸ್ರೇಲ್‌ನಿಂದ ಗಾಜಾಪಟ್ಟಿಯಲ್ಲಿ ಪ್ಯಾಲೆಸ್ಟೈನ್ ಮಕ್ಕಳು ಮತ್ತು ನಾಗರಿಕರ ಮೇಲಿನ ನರಮೇಧ ಖಂಡಿಸಿ ಎಸ್‌ಡಿಪಿಐ ಪಕ್ಷದಿಂದ ಅ.31 ರಂದು ಮಧ್ಯಾಹ್ನ 3 ನಗರದ ಅಶೋಕಾ ರಸ್ತೆಯಲ್ಲಿರುವ ಮೀಲಾದ್ ಬಾಗ್ ಬಳಿ `ಸಾಲಿಡಾರಿಟಿ ವಿತ್ ಪ್ಯಾಲೆಸ್ತೀನ್ ಪೀಪಲ್’ ರ‍್ಯಾಲಿ ನಡೆಸಲು ನಿರ್ಧರಿಸಿದ್ದ ಎಸ್‌ಡಿಪಿಐ ಸಂಘಟನೆಗೆ ನಗರ ಪೊಲೀಸ್ ಆಯುಕ್ತ ಡಾ. ರಮೇಶ್ ಅನುಮತಿ ನೀಡಿಲ್ಲ. ಬದಲಿಗೆ ಇಂದು ಬೆಳಗ್ಗೆ 9 ಗಂಟೆಯಿoದ ರಾತ್ರಿ 12 ಗಂಟೆವರೆಗೆ ಮೈಸೂರು ನಗರ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದಾರೆ. ಒಂದು ವೇಳೆ ರ‍್ಯಾಲಿ ಕುರಿತು ಸಾಮಾಜಿಕ ಜಾಲ ತಾಣದಲ್ಲಿ ಏನದಾರೂ ಮಾಹಿತಿ ಹಂಚಿಕೊoಡರೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಅಲ್ಲದೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.