ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 46 ಮಂದಿ ಸಾಧಕರು, 17 ಸಂಸ್ಥೆಗಳು ಆಯ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ. ವಿವಿಧ ಕ್ಷೇತ್ರದ 46 ಮಂದಿ ಸಾಧಕರಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಅಲ್ಲದೆ ಉಳ್ಳಾಲ ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಸಹಿತ 17 ಸಂಸ್ಥೆಗಳಿಗೆ ಪ್ರಶಸ್ತಿ ಘೋಷಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಹರೇಕಳ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಬದ್ರುದ್ದೀನ್ ಹರೇಕಳ ಅವರಿಗೂ ಪ್ರಶಸ್ತಿ ಲಭಿಸಿದೆ.

ನ.1ರಂದು ಬೆಳಗ್ಗೆ 9ಕ್ಕೆ ನಗರದ ಕೇಂದ್ರ ಮೈದಾನದಲ್ಲಿ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಸ್ಪೀಕರ್ ಯು.ಟಿ.ಖಾದರ್ ಅವರ ಸಮ್ಮುಖ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಪ್ರದಾನಿಸಲಿದ್ದಾರೆ.

ಸಾಧಕರ ವಿವರ
ಡಾ. ಪ್ರಭಾಕರ ನೀರುಮಾರ್ಗ (ಸಾಹಿತ್ಯ), ಇರಾ ನೇಮು ಪೂಜಾರಿ (ಸಾಹಿತ್ಯ), ಮಹೇಶ್ ಆರ್. ನಾಯಕ್ (ಸಾಹಿತ್ಯ), ಅರುಣಾ ನಾಗರಾಜ್ (ಸಾಹಿತ್ಯ-ಶಿಕ್ಷಣ), ರಮೇಶ್ ಪಳನೀರು (ಕಲೆ), ಡಾ. ರವೀಶ್ ಪರವ ಪಡುಮಲೆ (ಜಾನಪದ), ರವಿಚಂದ್ರ ಬಿ. ಸಾಲಿಯಾನ್ ಗುಂಡೂರಿ (ನಾಟಕ), ಜಗದೀಶ್ ಆಚಾರ್ಯ ಶಿವಪುರ (ಸಂಗೀತ), ಎ. ಸುರೇಶ್ (ಸಂಗೀತ), ಉಮೇಶ್ ಬೋಳಾರ್ (ಶಿಲ್ಪಕಲೆ), ಎಂ. ದೇವಾನಂದ ಭಟ್ (ಯಕ್ಷಗಾನ), ದಿನೇಶ್ ಶೆಟ್ಟಿಗಾರ್ (ಯಕ್ಷಗಾನ ಕಲೆ), ಪ್ರಮೋದ್ ಉಳ್ಳಾಲ್ (ಭರತನಾಟ್ಯ), ಶಿಫಾಲಿ ಎನ್. ಕರ್ಕೇರಾ (ಕುಣಿತ ಭಜನೆ), ಚಿತ್ತರಂಜನ್ ಬೋಳಾರ್ (ಸಹಕಾರ), ಲಿಯೋ ಫೆರ್ನಾಂಡೀಸ್ (ಕೃಷಿ), ಅಬ್ದುಲ್ಲಾ ಮಾದುಮೂಲೆ (ಗಡಿನಾಡು ಕನ್ನಡಿಗ), ಎಂ.ಎಚ್.ಮಲಾರ್ (ಶಿಕ್ಷಣ), ಡಾ. ಮಂಜುನಾಥ ಎಸ್. ರೇವಣಕರ್ (ಶಿಕ್ಷಣ), ಶೇಖರ ಪಂಬದ (ದೈವಾರಾಧನೆ), ರವಿ ಪೊಸವಣಿಕೆ (ಮಾಧ್ಯಮ), ಇಬ್ರಾಹೀಂ ಅಡ್ಕಸ್ಥಳ (ಮಾಧ್ಯಮ), ವಿಜಯ ಕಾಂಚನ್ (ಕ್ರೀಡೆ), ಜಯಪ್ಪ ಲಮಾಣಿ (ಕ್ರೀಡೆ), ಬಿ.ಎಸ್. ಹಸನಬ್ಬ (ಪರಿಸರ), ರೊನಾಲ್ಡ್ ಸಿಲ್ವನ್ ಡಿಸೊಜ (ಉದ್ಯಮ), ಮದನ್ ರೈ (ಉದ್ಯಮ), ಬದ್ರುದ್ದೀನ್ ಹರೇಕಳ (ಗ್ರಾಮೀಣಾಭಿವೃದ್ಧಿ), ಎಸ್.ಕೆ. ಶ್ರೀಪತಿ ಭಟ್ (ಸಮಾಜ ಸೇವೆ), ಮುಹಮ್ಮದ್ ಇಸ್ಮಾಯೀಲ್ ಜಿ (ಸಮಾಜ ಸೇವೆ), ಶ್ವೇತಾ ಜೈನ್ (ಸಮಾಜ ಸೇವೆ), ಕೆ.ಪಿ. ಅಹ್ಮದ್ ಪುತ್ತೂರು (ಸಮಾಜ ಸೇವೆ), ಪದ್ಮನಾಭ ನರಿಂಗಾನ (ಸಮಾಜ ಸೇವೆ), ಅಶೋಕ ಗೌಡ ಪಿ. (ಸಮಾಜ ಸೇವೆ), ಎನ್. ರವೀಂದ್ರ ಶೆಟ್ಟಿ ನುಳಿಯಾಲು (ಸಮಾಜ ಸೇವೆ), ಅಬ್ದುಲ್ ಕರೀಂ ಬ್ಯಾರಿ ಅಡ್ಡೂರು (ಸಮಾಜ ಸೇವೆ), ಚಂದ್ರಕಲಾ ದೀಪಕ್ ರಾವ್ (ಸಮಾಜ ಸೇವೆ), ಮುಹಮ್ಮದ್ ರಫಿ (ಸಮಾಜ ಸೇವೆ), ಬಾವಾ ಜಾನ್ ಬೆಂಗ್ರೆ (ಸಮಾಜ ಸೇವೆ), ಡಾ. ಕೆ.ಟಿ. ವಿಶ್ವನಾಥ ಸುಳ್ಯ(ಸಮಾಜ ಸೇವೆ), ಹೆನ್ರಿ ಮೆಂಡೋನ್ಸಾ (ಕೊಂಕಣಿ ಸಾಹಿತ್ಯ-ಮಾಧ್ಯಮ), ಕೇಶವ ಭಂಡಾರಿ (ಕೃಷಿ), ಮಾಧವ ಪರವ (ದೈವನರ್ತನೆೆ), ಅಶ್ವಲ್ ರೈ ಬೆಳ್ತಂಗಡಿ (ಕ್ರೀಡೆ), ಮನ್ಮಥ ಜೆ. ಶೆಟ್ಟಿ (ದೈವಾರಾಧನೆ-ಜಾನಪದ ಸಾಹಿತ್ಯ), ಎ.ಎಸ್. ದಯಾನಂದ ಕುಂತೂರು (ಕಲೆ).

ಸಂಘ ಸಂಸ್ಥೆಗಳ ವಿವರ
ಸಾರ್ವಜನಿಕ ಶ್ರೀಕೃಷ್ಣ ಜಯಂತ್ಯುತ್ಸವ ಸಮಿತಿ (ರಿ)-ಅತ್ತಾವರ (ಧಾರ್ಮಿಕ), ಭಗಿನಿ ಸಮಾಜ-ಜಪ್ಪು, (ಸಮಾಜ ಸೇವೆ), ಕೆಥೊಲಿಕ್ ಸಭಾ ಮಂಗ್ಳೂರ್ ಪ್ರದೇಶ (ರಿ)-ಕೊಡಿಯಾಲ್‌ಬೈಲ್ (ಧಾರ್ಮಿಕ), ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಳ್ಳಾಲ (ರಿ)- (ಸಮಾಜ ಸೇವೆ), ಕುದ್ಮಲ್ ರಂಗರಾವ್ ಸ್ಮಾರಕ ಸಂಘ-ಬಿಜೈ ಕಾಪಿಕಾಡ್ (ಸಮಾಜ ಸೇವೆ), ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ)-ಚಿನ್ಮಯ ಉಜಿರೆ (ಸಾಂಸ್ಕೃತಿಕ), ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘ ನಿ.- ಕೋಟೆಕಾರು (ಸಹಕಾರ), ಯೂತ್ಸ್ ಸ್ಪೋಟ್ಸ್ ಅಕಾಡಮಿ ಉಳ್ಳಾಲ (ಕ್ರೀಡೆ), ಶ್ರೀ ಗುರುದೇವ ವಿವಿದ್ದೋದ್ದೇಶ ಸಹಕಾರ ಸಂಘ ನಿ. ಬೆಳ್ತಂಗಡಿ (ಸಹಕಾರ), ಬರ್ಕೆ ಫ್ರೆಂಡ್ಸ್- ಅಳಕೆ (ಸಾಂಸ್ಕೃತಿಕ), ಬ್ರದರ್ಸ್ ಯುವಕ ಮಂಡಲ-ಮೊಗವೀರ ಪಟ್ಣ ಉಳ್ಳಾಲ(ಸಮಾಜ ಸೇವೆ), ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು(ಸಮಾಜ ಸೇವೆ), ಬಿಲ್ಲವ ಸೇವಾ ಸಮಾಜ ಟ್ರಸ್ಟ್(ರಿ) ಕೊಲ್ಯ(ಸಮಾಜಸೇವೆ), ಪಕ್ಕಲಡ್ಕ ಯುವಕ ಮಂಡಲ(ರಿ)-(ಸಮಾಜಸೇವೆ), ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವಕವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಕಣ್ಣೂರು (ಸಾಮಾಜಿಕ/ಶೈಕ್ಷಣಿಕ), ಯುವಕ ಮಂಡಲ (ರಿ)-ಇರಾ (ಸಮಾಜ ಸೇವೆ), ಶ್ರೀ ವಿನಾಯಕ ಮಿತ್ರ ಮಂಡಳಿ (ರಿ) ಪಕ್ಷಿಕೆರೆ ( ಸಾಮಾಜಿಕ /ಶೈಕ್ಷಣಿಕ)

ಸಹಕಾರ ಕ್ಷೇತ್ರದಲ್ಲಿ ಚಿತ್ತರಂಜನ್
ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿ ಆತ್ಮಶಕ್ತಿ ವಿವಿದೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರಕಟಿಸಲಾಗಿದೆ.
ಚಿತ್ತರಂಜನ್ ಬೋಳಾರ್ ಅವರು 2011 ರಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘವನ್ನು (AMCS) ಸ್ಥಾಪಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!