Sunday, December 10, 2023

Latest Posts

ಸೋಲಿನಿಂದ ಕಂಗೆಟ್ಟಿದ್ದ ಪಾಕಿಸ್ತಾನಕ್ಕೆ ಗೆಲುವಿನ ಖುಷಿ: ಬಾಂಗ್ಲಾ ವಿರುದ್ಧ 7 ವಿಕೆಟ್‌ಗಳ ಜಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸತತ ಸೋಲಿನಿಂದ ಕಂಗೆಟ್ಟಿದ್ದ ಪಾಕಿಸ್ತಾನ (Pakistan) ಕೊನೆಗೂ ಜಯ ಸಾಧಿಸಿದೆ. ಬೌಲರ್‌ ಮತ್ತು ಬ್ಯಾಟರ್‌ಗಳ ಸಾಂಘಿಕ ಪ್ರದರ್ಶನದಿಂದ ಬಾಂಗ್ಲಾದೇಶದ (Bangladesh) ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದ ಪಾಕ್‌ ಅಂಕ ಪಟ್ಟಿಯಲ್ಲಿ 6 ಅಂಕ ಪಡೆದು 5ನೇ ಸ್ಥಾನಕ್ಕೆ ಜಿಗಿದಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಬೀಸಿದ ಬಾಂಗ್ಲಾದೇಶ 45.1 ಓವರ್‌ಗಳಲ್ಲಿ 204 ರನ್‌ಗಳಿಗೆ ಆಲೌಟ್‌ ಆಯ್ತು. ಸುಲಭದ ಸವಾಲನ್ನು ಬೆನ್ನಟ್ಟಿದ ಪಾಕಿಸ್ತಾನ ಇನ್ನೂ 105 ಎಸೆತ ಬಾಕಿ ಇರುವಂತೆಯೇ 3 ವಿಕೆಟ್‌ ನಷ್ಟಕ್ಕೆ 205 ರನ್‌ ಹೊಡೆದು ಜಯಗಳಿಸಿತು.

ಅಬ್ದುಲ್ಲಾ ಶಫಿಕ್‌ 68 ರನ್‌ (69 ಎಸೆತ, 9 ಬೌಂಡರಿ, 2 ಸಿಕ್ಸರ್‌) ಹೊಡೆದರೆ ಫಖರ್‌ ಜಮಾನ್‌ 81 ರನ್‌ (74 ಎಸೆತ, 3 ಬೌಂಡರಿ, 7 ಸಿಕ್ಸರ್‌) ಚಚ್ಚಿ ಔಟಾದರು . ನಾಯಕ ಬಾಬರ್‌ ಅಜಂ 9 ರನ್‌ ಗಳಿಸಿ ಔಟಾದರೂ ಮೊಹಮ್ಮದ್‌ ರಿಜ್ವಾನ್‌ ಔಟಾಗದೇ 26 ರನ್‌ (21 ಎಸೆತ, 4 ಬೌಂಡರಿ) ಇಫ್ತಿಕಾರ್‌ ಅಹ್ಮದ್‌ ಔಟಾಗದೇ 17 ರನ್‌ (15 ಎಸೆತ, 2 ಬೌಂಡರಿ) ಹೊಡೆಯುವ ಮೂಲಕ ಜಯವನ್ನು ತಂದುಕೊಟ್ಟರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!