ಕದಂಬರ ಲಾಂಛನವಿರುವ ಧ್ವಜ ಹಾರಿಸಿ ರಾಜ್ಯೋತ್ಸವ ಆಚರಿಸಿದ ಕನ್ನಡಾಭಿಮಾನಿ

ಹೊಸದಿಗಂತ ವರದಿ ಬನವಾಸಿ:

ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಸರ್ಕಾರಿ ಕಚೇರಿ, ಶಾಲೆಗಳಲ್ಲಷ್ಟೇ ಅಲ್ಲದೆ ಮನೆಗಳಲ್ಲಿಯೂ ಕನ್ನಡಾಂಬೆಗೆ ಪ್ರಾರ್ಥನೆ ಸಲ್ಲಿಕೆಯಾಗುತ್ತಿದೆ. ಉತ್ತರಕನ್ನಡ ಜಿಲ್ಲೆ ಬನವಾಸಿಯ ಜನತಾ ಕಾಲೋನಿಯ ಕನ್ನಡ ಅಭಿಮಾನಿ ಚನ್ನಬಸಪ್ಪ ಕಾಂತ್ರಜಿ ಅವರು ಬುಧವಾರ ವಿಷೇಶವಾಗಿ 68ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು.

ತಮ್ಮ ಮನೆಯ ಮುಂದೆ ಕನ್ನಡದ ಪ್ರಥಮ ರಾಜಧಾನಿಯಾಗಿರುವ ಬನವಾಸಿಯ ಕದಂಬರ ಲಾಂಛನವಿರುವ ಧ್ವಜವನ್ನು ಹಾರಿಸಿ ಸಂಭ್ರಮದಿಂದ ಆಚರಿಸಿದರು.ಇವರು ಕಳೆದ 45ವರ್ಷಗಳಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದು, ಇವರ ಕನ್ನಡ ಅಭಿಮಾನಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!