ನಮ್ಮ ದೇಹದ ಶೇ.60ರಷ್ಟು ಭಾಗ ನೀರಿನಿಂದಲೇ ಅನ್ನೋದು ಗೊತ್ತಿರೋ ವಿಷಯವೇ, ದೇಹದ ಸರಿಯಾದ ತೂಕ ತೂಗಿಸೋಕೆ, ದೇಹದ ಕೊಳಕು ಅಂಶ ಹೊರಗೆ ಕಳಿಸೋಕೆ, ಸರಿಯಾಗಿ ಮಲ, ಮೂತ್ರ ವಿಸರ್ಜನೆ ಮಾಡೋಕೆ ಎಲ್ಲದಕ್ಕೂ ನೀರೇ ಮುಖ್ಯ.
- ನೀವು ನೀರು ಕುಡಿಯುತ್ತಿದ್ದೀರಿ, ಆದರೆ ಆ ನೀರು ನಿಮ್ಮ ದೇಹಕ್ಕೆ ಸಾಕಾಗ್ತಾ ಇದೆಯಾ? ನೀರು ಸಾಲುತ್ತಿಲ್ಲ ಎಂದಾದರೆ ಈ ರೀತಿ ಲಕ್ಷಣಗಳು ಕಾಣಿಸುತ್ತವೆ..
- ಯಾವಾಗ್ಲೂ ಬಾಯಿಂದ ಕೆಟ್ಟ ವಾಸನೆ ಬರೋದು ಮಾಮೂಲಿ ವಿಷಯ ಅಲ್ಲ, ಹೆಚ್ಚು ನೀರು ಕುಡಿಯಿರಿ. ಆಗಲೂ ಇದೇ ಹೆಚ್ಚಾದ್ರೂ ವೈದ್ಯರನ್ನು ಸಂಪರ್ಕಿಸಿ.
- ನಿಮ್ಮ ದೇಹದಲ್ಲಿ ನೀರಿನ ಅಂಶ ಕಡಿಮೆಯಾದಂತೆ, ಯಾವಾಗಲೂ ಸುಸ್ತು ಎನಿಸುತ್ತದೆ. ದೇಹದಲ್ಲಿ ಎನರ್ಜಿ ಇಲ್ಲ ಎನಿಸುತ್ತದೆ. ನಿದ್ದೆ ಮಾಡಲು ಕಷ್ಟವಾಗುತ್ತದೆ. ಎಂಟು ಗಂಟೆ ನಿದ್ದೆ ನಂತರವೂ ಸುಸ್ತು ಎನಿಸುತ್ತದೆ.
- ಆಗಾಗ ಅನಾರೋಗ್ಯಕ್ಕೆ ತುತ್ತಾಗುವುದು ನೀರು ಕುಡಿಯದವರಲ್ಲಿ ಸರ್ವೇ ಸಾಮಾನ್ಯ. ನೀರು ಹೆಚ್ಚು ಕುಡಿದರೆ ದೇಹದ ಕೆಟ್ಟ ಅಂಶ, ಕೆಟ್ಟ ಬ್ಯಾಕ್ಟೀರಿಯಾ ಹೊರಹೋಗಲು ಸಾಧ್ಯ. ಆದರೆ ನೀರೇ ಕುಡಿಯದಿದ್ದರೆ ಅನಾರೋಗ್ಯಕ್ಕೆ ತುತ್ತಾಗುತ್ತೀರಿ.
- ಮಲ ವಿಸರ್ಜನೆಗೆ ತೊಂದರೆಯಾವುದು, ದಿನವೂ ಮಲ ವಿಸರ್ಜನೆ ಮಾಡಲಾಗುವುದಿಲ್ಲ. ಮಾಡಿದರೂ ಗಟ್ಟಿಯಾದ ಮಲ ವಿಸರ್ಜನೆಯಿಂದ ರಕ್ತ ಬರುವುದು, ನೋವಾಗುವುದು ಹಾಗೂ ಹೊಟ್ಟೆ ಉಬ್ಬರ ಆಗುತ್ತದೆ.
- ಚರ್ಮ ಆರೋಗ್ಯವಾಗಿ ಇರೋದಿಲ್ಲ, ಒಣಗಿದಂತ ಡಲ್ ಸ್ಕಿನ್ ನಿಮ್ಮದಾಗಿರುತ್ತದೆ.
- ಯಾವಾಗಲೂ ಸಕ್ಕರೆ ಅಂಶ ತಿನ್ನೋಣ ಎನ್ನುವ ಆಸೆ ಆಗುತ್ತದೆ. ಸಿಹಿ ತಿಂಡಿಯಮೇಲೆ ಒಲವು ಹೆಚ್ಚಾಗುತ್ತದೆ.
- ಮೂತ್ರ ವಿಸರ್ಜನೆ ಕಡಿಮೆಯಾಗುತ್ತದೆ. ಇದರಿಂದಾಗಿ ಕಿಡ್ನಿಗೆ ಸಂಬಂಧಿಸಿದ ತೊಂದರೆಗಳನ್ನು ಅನುಭವಿಸುತ್ತೀರಿ.