ಪುರಾತನ ಕಾಲದ ಜಿಂಕೆಕೊಂಬು ವಶ: ಅರಣ್ಯಾಧಿಕಾರಿಗಳ ವಿರುದ್ಧ ಶಾಸಕ ಆರಗ ಜ್ಞಾನೇಂದ್ರ ಪ್ರತಿಭಟನೆ

ಹೊಸದಿಗಂತ ವರದಿ ಶಿವಮೊಗ್ಗ:

ತೀರ್ಥಹಳ್ಳಿ ತಾಲ್ಲೂಕಿನ ಹಣಗೆರೆಯಲ್ಲಿ ಪುರಾತನ ಕಾಲದ ಜಿಂಕೆ ಮತ್ತು ಕಾಡುಕೋಣದ ಕೊಂಬನ್ನು ವಶಪಡಿಸಿಕೊಂಡು, ವ್ಯಕ್ತಿಯನ್ನು ಅರೆಸ್ಟ್ ಮಾಡಲು ಬಂದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಶಾಸಕ ಆರಗ ಜ್ಞಾನೇಂದ್ರ. ತೀವ್ರ ಪ್ರತಿಭಟನೆ ನಡೆಸಿದ್ದಾರೆ.

ತೀರ್ಥಹಳ್ಳಿ ತಾಲೂಕು ಹಣಗೆರೆ ಸಮೀಪದ ಬಸವನಗದ್ದೆಯ ಗೌರವಾನ್ವಿತ ಬ್ರಾಹ್ಮಣ ಕುಟುಂಬದ ಪ್ರಸನ್ನ ಎಂಬುವವರ ಮನೆಯಲ್ಲಿ ನೂರಾರು ವರ್ಷಗಳ ಹಿಂದಿನ ಕಾಡಿನಲ್ಲಿ ಅದಾಗಿಯೇ ಬಿದ್ದ ಜಿಂಕೆ ಕೊಂಬು ಮತ್ತು ಕಾಡುಕೋಣದ ಕೊಂಬುಗಳಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿ ಗಳು ದಾಳಿ ನಡೆಸಿದ್ದರು.
ಕೊಂಬುಗಳನ್ನು ವಶಕ್ಕೆ ಪಡೆದು ವಯಸ್ಸಾಗಿ ಅನಾರೋಗ್ಯದಲ್ಲಿರುವ ಯಜಮಾನನ್ನು ಬಂಧಿಸಲು ಮುಂದಾಗಿದ್ದರು.

ಸುದ್ದಿ ತಿಳಿದ ಮಾಜಿ ಗೃಹ ಸಚಿವ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರರವರು ಗ್ರಾಮಸ್ಥರೊಂದಿಗೆ ಅರಣ್ಯಾಧಿಕಾರಿಗಳ ಈ ದಿಡೀರ್ ಕ್ರಮ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!