RECIPE| ವಿಭಿನ್ನವಾದ ರುಚಿ ಪನೀರ್ ಅವಲಕ್ಕಿ ಒಗ್ಗರೆಣ್ಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಕಾಗುವ ಸಾಮಗ್ರಿಗಳು:

ಅವಲಕ್ಕಿ
ಪನೀರ್
ಈರುಳ್ಳಿ
ಹಸಿಮೆಣಸಿನ ಕಾಯಿ
ಗೋಡಂಬಿ
ಎಣ್ಣೆ
ಜೀರಿಗೆ
ಕರಿಬೇವು ಎಲೆಗಳು
ಅರಿಶಿಣ ಪುಡಿ
ಉಪ್ಪು
ಮೆಣಸು
ನಿಂಬೆ ರಸ
ಸಕ್ಕರೆ
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ:

* ಮೊದಲು ಅವಲಕ್ಕಿಯನ್ನು ನೆನೆಸಿ ಮೆತ್ತಗಾದ ನಂತರ ನೀರನ್ನು ಸೋಸಿ.
* ಒಂದು ಬಾಣಲಿಯಲ್ಲಿ ಎಣ್ಣೆ ಹಾಕಿ ಕಾದ ನಂತರ ಜೀರಿಗೆ, ಈರುಳ್ಳಿ, ಹಸಿಮೆಣಸಿನ ಕಾಯಿ, ಕರಿಬೇವು ಎಲೆಗಳನ್ನು ಸೇರಿಸಿ ಈರುಳ್ಳಿ ಕೆಂಪಾಗುವವರೆಗೆ ಹುರಿಯಿರಿ.
* ಗೋಡಂಬಿಯನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ.

* ಈಗ ಪನೀರ್ ಸೇರಿಸಿ ಅದು ಹೊಂಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.
* ನಂತರ ಅರಿಶಿಣ ಮತ್ತು ಉಪ್ಪನ್ನು ಸೇರಿಸಿ ಕಲಸಿ.

* ಇದಕ್ಕೆ ನೆನೆಸಿದ ಅವಲಕ್ಕಿಯನ್ನು ಸೇರಿಸಿ ಅದರೊಂದಿಗೆ ಪುಡಿಮಾಡಿಟ್ಟುಕೊಂಡ ಅವಲಕ್ಕಿ, ಸಕ್ಕರೆ, ನಿಂಬೆ ರಸವನ್ನು ಹಾಕಿ ಕಲಸಿ ಒಂದೆರಡು ನಿಮಿಷ ಬೇಯಿಸಿ.
* ನಂತರ ಒಲೆ ಆರಿಸಿ ಕೊತ್ತಂಬರಿ ಸೊಪ್ಪನ್ನು ಅದಕ್ಕೆ ಹಾಕಿ ಮಿಶ್ರ ಮಾಡಿ.

ಇದೀಗ ಪನ್ನೀರ್‌ ಅವಲಕ್ಕಿ ಉಪ್ಪಿಟ್ಟು ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!