ಹೊಸ ದಿಗಂತ ವರದಿ, ಜಮಖಂಡಿ :
ಶಾಸಕಾಂಗ ಪಕ್ಷದ ನಾಯರೇ ಮುಖ್ಯ ಮಂತ್ರಿಗಳಾಗಿರುತ್ತಾರೆ. ಪ್ರಸ್ತುತ ಸಿದ್ದರಾಮಯ್ಯನವರೇ ನಮ್ಮ ಮುಖ್ಯ ಮಂತ್ರಿಗಳು ಅವರನ್ನು ಶಾಸಕಾಂಗ ಪಕ್ಷದಿಂದ ಈ ಹುದ್ದೆಗೆ ಏರಿಸಲಾಗಿದೆ. ಮುಖ್ಯ ಮಂತ್ರಿಯವರು ನಾನೇ ಐದು ವರ್ಷ ಮುಖ್ಯ ಮಂತ್ರಿಯೆಂದು ಹೇಳಿದರಲ್ಲಿ ತಪ್ಪಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಜಮಖಂಡಿ ತಾಲೂಕಿನ ಕಂಕನವಾಡಿ ಗ್ರಾಮದ ರೈತರಿಂದ ನಿರ್ಮಿತವಾದ ತೇಲು ಸೇತುವೆಯನ್ನು ಉದ್ಘಾಟಿಸಲು ಆಗಮಿಸಿದ ಸಂದರ್ಭ ದಲ್ಲಿ ಅವರು ಮಾತನಾಡಿ, ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ನಮ್ಮ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆಯಾಗುತ್ತದೆ. ನಮ್ಮಲ್ಲಿ ಯಾವುದೇ ತರಹದ ಗೊಂದಲಗಳಿಲ್ಲ ಕಾಂಗ್ರೆಸ್ಸ ಪಕ್ಷದಲ್ಲಿ ಎಲ್ಲವೂ ಸರಿಯಿದೆ ಎಂದರು.
ಜಮಖಂಡಿ ರೈತರು ಒಮದಿಲ್ಲೊಂದು ಸಾಧನೆ ಮಡುತ್ತಲೇ ಬಂದಿದ್ದಾರೆ. ಈ ಮೊದಲು ದಿ .ಸಿದ್ದು ನ್ಯಾಮ,ಗೌಡರು ಹಾಗೂ ರೈತರು ಸೇರಿ ಚಿಕ್ಕಪಡಸಲಗಿ ಬ್ಯಾರೇಜು ನಿರ್ಮಾಣ ಮಾಡಿದ್ದರು ಈಗ ಮತ್ತೇ ಅಂತಹದೊಂದು ಸಾಧನೆ ರೈತರಿಂದ ಕೃಷ್ಣಾ ನದಿಗೆ ತೇಲು ಸೇತುವೆ ನಿರ್ಮಾಣ ಮಾಡಿದ್ದು ಅದ್ಭುತವಾದ ಕಾರ್ಯವೆಂದರು. ಸರಕಾರದ ಕಣ್ಣು ತೆರೆಯಿಸುವ ಕೆಲಸವನ್ನು ಮಾಡಿದ್ದಾರೆ. ನಾವು ಮತ್ತು ಎಲ್ಲ ಜನಪ್ರತಿನಿಧಿಗಳು ಸೇರಿಕೊಂಡು ಇದಕ್ಕೊಂದು ಶಾಶ್ವತ ಪರಿಹಾರ ನೀಡುತ್ತೇವೆ ಎಂದು ತಿಳಿಸಿದರು.
ಶಾಸಕ ಜಗದೀಶ್ ಗುಡಗುಂಟಿ,ಮಾಜಿ ಶಾಸಕ ಆನಂದ ನ್ಯಾಮಗೌಡರ ಇದ್ದರು.