Sunday, December 10, 2023

Latest Posts

ಸಾಲಬಾಧೆ ತಾಳದೆ ವಿಷ ಸೇವಿಸಿ ರೈತ ಆತ್ಮಹತ್ಯೆ

ಹೊಸ ದಿಗಂತ ವರದಿ, ಮೈಸೂರು:

ಸಾಲ ಬಾಧೆಯಿಂದ ಜಿಗುಪ್ಸೆಗೊಂಡು ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಅಲ್ಪನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿಯಾದ ಮಂಜುನಾಥ್ (44) ಸಾವನ್ನಪ್ಪಿದ ರೈತ. ಇವರಿಗೆ ಅಲ್ಪನಾಯಕನಹಳ್ಳಿ ಹಾಗೂ ಗೊರಹಳ್ಳಿ ಗ್ರಾಮದ ಸರ್ವೆ ನಂಬರ್ 101/2 ಮತ್ತು 99/2 ರಲ್ಲಿ ಒಟ್ಟು 5 ಎಕರೆ ಜಮೀನಿದ್ದು, ಜಮೀನಿನಲ್ಲಿ ತಂಬಾಕು ಬೆಳೆ ಬೆಳೆಯಲಾಗಿದ್ದು, ಎಸ್ ಬಿಐ ಸೀಗೂರು ಬ್ಯಾಂಕ್ ನಲ್ಲಿ ರೂ. 12 ಲಕ್ಷ ಹಾಗೂ 6 ಲಕ್ಷ ಕೈ ಸಾಲ ಮಾಡಿದ್ದು, ಅನಾವೃಷ್ಟಿಯಿಂದ ಸಕಾಲಕ್ಕೆ ಮಳೆಯಾಗದೆ ಬೆಳೆ ಸರಿಯಾದ ಪ್ರಮಾಣದಲ್ಲಿ ಬಾರದ ಕಾರಣ ತನ್ನ ಜಮೀನಿನಲ್ಲಿ ಶುಕ್ರವಾರ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.

ಮೃತರಿಗೆ 4 ಜನ ಹೆಣ್ಣು ಮಕ್ಕಳಿದ್ದು, ಈ ಕುರಿತು ಪತ್ನಿ ಸವಿತಾ ಬೆಟ್ಟದಪುರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!