ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಗ್ರಿಗಳು:
* ಕೆಂಪು ಮೆಣಸು
* ಕೆಂಪು ಮೆಣಸಿನ ಬೀಜ
* ಬೆಳ್ಳುಳ್ಳಿ
* ಶುಂಠಿ ಪೇಸ್ಟ್
* ಟೋಮೇಟೊ
* ಲಿಂಬೆರಸ
* ಆಲಿವ್ ಎಣ್ಣೆ
* ಉಪ್ಪು
* ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ:
1. ಒಣಗಿರುವ ಕೆಂಪು ಮೆಣಸುಗಳನ್ನು ಬಳಸುತ್ತಿದ್ದಲ್ಲಿ, ಕೆಂಪು ಮೆಣಸನ್ನು ಬಿಸಿನೀರಿನಲ್ಲಿ ಕೆಲವು ಗಂಟೆಗಳ ಕಾಲ ನೆನೆಸಿಡಿ. ನಂತರ ಮೆಣಸನ್ನು ಒಣಗಿಸಿ ಪಕ್ಕದಲ್ಲಿರಿಸಿ.
2. ಒಂದು ಪಾತ್ರೆಗೆ ಟಮೊಟೊ, ಒಣಮೆಣಸಿನಕಾಯಿ, ನೀರು ಹಾಕಿ ಬೇಯಿಸಿಕೊಳ್ಳಿ.
3. ನಂತರ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.
4. ಈಗ ಒಂದು ಬಾಣಲೆಗೆ ಎಣ್ಣೆ, ಬೆಳ್ಳುಳ್ಳಿ, ಉಪ್ಪು, ಶುಂಠಿ ಪೇಸ್ಟ್ ಹಾಕಿ ಜೊತೆಗೆ ರುಬ್ಬಿಕೊಂಡ ಮಿಶ್ರಣ ಹಾಕಿ. ಅದಕ್ಕೆ ಆಲಿವ್ ಆಯಿಲ್ ಹಾಕಿ ಕುದಿಸಿಕೊಳ್ಳಿ.
5. ಕೊನೆಯಿಂದ ಒಲೆಯಿಂದ ಕೆಳಗಿಳಿಸಿ ಲಿಂಬೆರಸ, ಕೊತ್ತಂಬರಿ ಸೊಪ್ಪು ಸೇರಿಸಿ.
ಈಗ ಕೆಂಪು ಮೆಣಸು ಹಾಗೂ ಬೆಳ್ಳುಳ್ಳಿಯ ಖಾರವಾಗಿರುವ ಈ ಚಟ್ನಿಯನ್ನು ಬಿಸಿಬಿಸಿಯಾದ ಮೊಮೊಗಳೊ೦ದಿಗೆ ಸವಿಯಿರಿ.