ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿಯಲ್ಲಿ ಅನ್ನೋ ಹಾಗಿದೆ ನಮ್ಮ ಸಿಲಿಕಾನ್ ಸಿಟಿ ಜನರ ಕಥೆ. ಬೊಮ್ಮನಹಳ್ಳಿ ಬಳಿಕ ಇದೀಗ ನೈಸ್ ರಸ್ತೆಯ ಚಿಕ್ಕತೋಗೂರು ಬಳಿ ಚಿರತೆ ಓಡಾಟ ಸ್ಥಳೀಯ ಜನರ ನಿದ್ದೆಗೆಡಿಸಿದೆ.
ನಿನ್ನೆ ರಾತ್ರಿ 7.40ರ ಸಮಯದಲ್ಲಿ ಚಿಕ್ಕತೋಗೂರಿನ ಮನೆಯೊಂದರ ಕಾಂಪೌಂಡ್ ಬಳಿ ಚಿರತೆ ಕಾಣಿಸಿಕೊಂಡಿದೆ. ಕಾಂಪೌಂಡ್ ಬಾಗಿಲ ಬಳಿ ಚಿರತೆ ಕಂಡ ಬಾಲಕ ಜೋರಾಗಿ ಕಿರುಚಿದ್ದು, ಕಿರುಚಾಟದ ಶಬ್ಧಕ್ಕೆ ಚಿರತೆ ಸ್ಥಳದಿಂದ ಕಾಲ್ಕಿತ್ತಿದೆ.
ಈ ಪ್ರದೇಶ ಕೆ.ಆರ್.ಪುರಂ ಅರಣ್ಯ ವ್ಯಾಪ್ತಿಗೆ ಸೇರಿದ್ದು, ಮಾಹಿತಿ ತಿಳಿದ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಮಳೆಯ ಪುಣ್ಯವೆಂಬಂತೆ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದ್ದು, ಚಿರತೆ ಸೆರೆಗೆ ಅರಣ್ಯಾಧಿಕಾರಿಗಳು ಸಜ್ಜಾಗಿದ್ದಾರೆ.